ETV Bharat / sitara

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ವಿರುದ್ಧ ಬಿಹಾರದಲ್ಲಿ ಎಫ್‌ಐಆರ್‌ - ಸುಶಾಂತ್‌ ಸಿಂಗ್‌ ರಜಪೂತ್

ಒಂದು ವೇಳೆ ಅಗತ್ಯ ಬಿದ್ದರೆ ದೀಪಿಕಾ ಪಡುಕೋಣೆಗೂ ಸಮನ್ಸ್‌ ನೀಡುವುದಾಗಿ ಎನ್‌ಸಿಬಿಯ ಮೂಲಗಳು ತಿಳಿಸಿವೆ. ವಾಟ್ಸ್‌ಆ್ಯಪ್‌ ಸಂಭಾಷಣೆಯಲ್ಲಿ ದೀಪಿಕಾ ಏಜೆನ್ಸಿಯೊಂದಿಗೆ ಡ್ರಗ್ಸ್‌ ಬಗ್ಗೆ ಚರ್ಚೆ ಮಾಡಿರುವ ಆರೋಪ ಕೇಳಿ ಬಂದಿದೆ..

fir-filed-against-deepika-padukone-in-bihar-court
ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ವಿರುದ್ಧ ಬಿಹಾರದಲ್ಲಿ ಎಫ್‌ಐಆರ್‌
author img

By

Published : Sep 23, 2020, 3:10 PM IST

ಪಾಟ್ನಾ(ಬಿಹಾರ): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಡ್ರಗ್ಸ್‌ ಜಾಲದ ನಂಟಿನ ಆರೋಪದಲ್ಲಿ ಬಾಲಿವುಡ್‌ ತಾರೆಯರಿಗೆ ಕಂಠಕವಾಗುವ ಸಾಧ್ಯತೆ ಇದೆ.

ಬಿಹಾರದ ಮುಜಾಫರ್‌ಪುರ್‌ ಸಿವಿಲ್‌ ಕೋರ್ಟ್‌ನಲ್ಲಿ ಬಾಲಿವುಡ್‌ ನಟಿ, ಕನ್ನಡದ ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಿನ್ನೆಯಷ್ಟೇ ಮಾದಕ ವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ದೀಪಿಕಾ ಮ್ಯಾನೇಜರ್‌ ಕರೀಶ್ಮಾ ಪ್ರಕಾಶ್‌ ಮತ್ತು ಕ್ವಾನ್‌ ಟ್ಯಾಲೆಂಟ್‌ ಮ್ಯಾನೇಜ್ಮೆಂಟ್‌ ಏಜೆನ್ಸಿಯ ಸಿಇಒ ಧ್ರುವ ಚಿಟ್ಗೋಪೆಕರ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತ್ತು.

ಒಂದು ವೇಳೆ ಅಗತ್ಯ ಬಿದ್ದರೆ ದೀಪಿಕಾ ಪಡುಕೋಣೆಗೂ ಸಮನ್ಸ್‌ ನೀಡುವುದಾಗಿ ಎನ್‌ಸಿಬಿಯ ಮೂಲಗಳು ತಿಳಿಸಿವೆ. ವಾಟ್ಸ್‌ಆ್ಯಪ್‌ ಸಂಭಾಷಣೆಯಲ್ಲಿ ದೀಪಿಕಾ ಏಜೆನ್ಸಿಯೊಂದಿಗೆ ಡ್ರಗ್ಸ್‌ ಬಗ್ಗೆ ಚರ್ಚೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಈಗಾಗಲೇ ಬಂಧನವಾಗಿರುವ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.