ETV Bharat / sitara

ಮುಂಬೈ ಪೊಲೀಸ್​ ಫೌಂಡೇಶನ್​ಗೆ ನೆರವು ನೀಡುವುದಾಗಿ ನಟ ಫರ್ಹಾನ್ ಅಖ್ತರ್​ ಭರವಸೆ - ಎಕ್ಸೆಲ್​ ಎಂಟರ್‌ಟೈನ್‌ಮೆಂಟ್

ಚಲನ ಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್​ ಎಂಟರ್‌ಟೈನ್‌ಮೆಂಟ್ ಮೂಲಕ ಮುಂಬೈ ಪೊಲೀಸ್​ ಫೌಂಡೇಶನ್​ಗೆ ನೆರವು ನೀಡುವುದಾಗಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್​ ತಿಳಿಸಿದ್ದಾರೆ.

Farhan Akhtar pledges to contribute to Mumbai Police Foundation

author img

By

Published : May 3, 2020, 8:05 AM IST

ಮುಂಬೈ : ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಪೊಲೀಸ್​ ಸಿಬ್ಬಂದಿಗೆ ನೆರವಾಗಲು ತಮ್ಮ ಚಲನಚಿತ್ರ ಕಂಪನಿ ಎಕ್ಸೆಲ್​ ಎಂಟರ್‌ಟೈನ್‌ಮೆಂಟ್ ಮೂಲಕ ಮುಂಬೈ ಪೊಲೀಸ್​ ಫೌಂಡೇಶನ್​ಗೆ ಸಹಾಯ ಮಾಡುವುದಾಗಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಮಗಾಗಿ ಕಾವಲು ಕಾಯುವವರ ಸೇವೆಗೆ ಸೆಲ್ಯೂಟ್​. ಯಾವಾಗಲೂ ಅವರ ನಿಸ್ವಾರ್ಥ ಸೇವೆಯ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ, ಆದರೆ ಖಂಡಿತವಾಗಿಯೂ ನಾವು ಅವರಿಗೆ ಬೆನ್ನೆಲುಬಾಗಿ ನಿಲ್ಲಬಹುದು. ಎಕ್ಸೆಲ್ ಮುಖಾಂತರ ಮುಂಬೈ ಪೊಲೀಸರಿಗೆ ಸಹಾಯ ಮಾಡುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ನಿಮ್ಮ ನಿಲುವೇನು ಎಂದು ಬರೆದುಕೊಂಡಿದ್ದಾರೆ.

  • Saluting the courage of those who stay on guard - always! We can't match their level of selflessness, but we can surely have their backs.
    We at Excel have pledged to contribute towards safeguarding our Mumbai Police Heroes. What about you?#MumbaiPoliceFoundation pic.twitter.com/4UQMwzIUSK

    — Farhan Akhtar (@FarOutAkhtar) May 2, 2020 " class="align-text-top noRightClick twitterSection" data=" ">

ಚಲನಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಫರ್ಹಾನ್ ಅಖ್ತರ್ ಮತ್ತು ನಿರ್ಮಾಪಕ ರಿತೇಶ್ ಸಿಧ್ವಾನಿ ಒಡೆತನದಲ್ಲಿದೆ. ಈ ವಾರದ ಆರಂಭದಲ್ಲಿ ನಟ ಅಕ್ಷಯ್ ಕುಮಾರ್ ಕೂಡ ಮುಂಬೈ ಪೊಲೀಸ್ ಫೌಂಡೇಶನ್​ಗೆ 2 ಕೋಟಿ ರೂ. ದೇಣಿಗೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.