ವಾರಣಾಸಿ : ಬಾಹುಬಲಿ, ಮಗಧೀರ ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಭಾರತೀಯ ಚಿತ್ರರಂಗದ ಖ್ಯಾತ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಮಂಗಳವಾರ ವಾರಣಾಸಿ ತಲುಪಿದ್ದಾರೆ. ಇಲ್ಲಿ ಅವರು ತಮ್ಮ ಮುಂಬರುವ ಚಿತ್ರ RRR ಪ್ರಚಾರಕ್ಕಾಗಿ ಬಂದಿದ್ದರು.
ರಾಜಮೌಳಿ ಜೊತೆಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್ ಕೂಡ ಉಪಸ್ಥಿತರಿದ್ದರು. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಾರಣಾಸಿಯ ರಾಜ್‌ಘಾಟ್‌ನಿಂದ ಬಾರ್ಜ್‌ನಲ್ಲಿ ಸವಾರಿ ಮಾಡುವ ಮೂಲಕ ಗಂಗಾನದಿಯ ಅಲೆಗಳನ್ನು ರಾಜಮೌಳಿ, ಜ್ಯೂ. ಎನ್‌ಟಿಆರ್ ಮತ್ತು ರಾಮಚರಣ್ ಆನಂದಿಸಿದರು. ಇದೇ ವೇಳೆ ಅವರು ಬನಾರಸ್ನ ಸೌಂದರ್ಯವನ್ನು ಹಾಡಿ ಹೊಗಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಎಸ್ ರಾಜಮೌಳಿ, ತಮ್ಮ ಮುಂಬರುವ ಚಿತ್ರದ ಬಗ್ಗೆ ಎಲ್ಲಾ ಮಾಹಿತಿ ನೀಡಿದರು.
ಈ ಚಿತ್ರಕ್ಕಾಗಿ 4 ವರ್ಷಗಳ ಪ್ಲಾನ್ ಹಾಕಿಕೊಂಡಿದ್ದೆ. 550 ಕೋಟಿಗೂ ಹೆಚ್ಚು ಬಜೆಟ್‌ನ ಚಿತ್ರದ ಪ್ರಚಾರಕ್ಕಾಗಿ ದೇಶದ ವಿವಿಧ ಭಾಗಗಳಿಗೆ ತೆರಳಿದ್ದೇವೆ. ವಾರಣಾಸಿ ನಮ್ಮ ಕೊನೆಯ ತಾಣವಾಗಿದೆ. ಇಲ್ಲಿ ಚಿತ್ರದ ಪ್ರಚಾರದ ನಂತರ ದೇಶ್ಯಾದ್ಯಂತ ಆರ್ಆರ್ಆರ್ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದ ಸಂಪೂರ್ಣ ಕಥೆ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಚಿತ್ರೀಕರಿಸಲಾಗಿದೆ ಎಂದರು.
ಓದಿ: ಮೂವರು ಹೆಂಡ್ತಿಯರ ಗಂಡನ ಕೊಲೆ ಪ್ರಕರಣ: ಪತಿಯ ಹತ್ಯೆಗೆ 10 ಲಕ್ಷ ಸುಪಾರಿ ಕೊಟ್ಟಿದ್ದು ಎರಡನೇ ಪತ್ನಿ!
ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಕೊಡುಗೆ ನೀಡುತ್ತಾರೆ ಎಂಬುದು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ. ಈ ಚಿತ್ರದಲ್ಲಿ ರಾಮ್‌ಚರಣ್ ಅಲ್ಲೂರ್ ಸೀತಾರಾಮ್ ರಾಜನ್ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜೂನಿಯರ್ ಎನ್‌ಟಿಆರ್ ಕೋಮರಂಭೀಮ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಹುಬಲಿಗಿಂತ ಈ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಿನಿಮಾ ಒಂದೇ ಭಾಗದಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗ ಬರುವುದಿಲ್ಲ. ಇದು ಐತಿಹಾಸಿಕ ಸಿನಿಮಾ ಅಲ್ಲ ಎಂದರು. ಸಂಪೂರ್ಣವಾಗಿ ಫಿಕ್ಷನ್-ಚಲನಚಿತ್ರ. ಈ ಚಿತ್ರವು ಇಬ್ಬರು ಲೆಜೆಂಡರಿ ಸ್ವಾತಂತ್ರ್ಯ ಹೋರಾಟಗಾರರ ಜೀವನವನ್ನು ಆಧರಿಸಿದೆ. ಸಂಪೂರ್ಣವಾಗಿ ಕೆಲಸ ಮಾಡಿದ ನಂತರವೇ ಪಾತ್ರಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಇಡೀ ಚಿತ್ರದ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಲಾಗಿದೆ.
ಇದು ಕೇವಲ ಸೌತ್ ಸಿನಿಮಾ ಅಲ್ಲ ಭಾರತೀಯ ಸಿನಿಮಾ. ಇದು ವಿವಿಧ ದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಮಾರ್ಚ್ 25ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದರು. ನಾನು ಚಿಕ್ಕವನಿದ್ದಾಗ ನಮ್ಮ ಹೆತ್ತವರು ತುಂಬಾ ಧಾರ್ಮಿಕರಾಗಿದ್ದರು. ಕಾಶಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ.
ನಮ್ಮ ತಾಯಿಗೆ ಬನಾರಸ್ ಎಂದರೆ ತುಂಬಾ ಇಷ್ಟ. ನಮ್ಮ ತಾಯಿ ಪ್ರತಿ ಶಿವರಾತ್ರಿಗೆ ಇಲ್ಲಿಗೆ ಬರುತ್ತಿದ್ದರು. ಬಾಬಾರವರು ಗಂಗಾಸ್ನಾನದ ಬಳಿಕ ವಿಶ್ವನಾಥನನ್ನು ಪೂಜಿಸುತ್ತಿದ್ದರು ಎಂದು ತಮ್ಮ ಬಾಲ್ಯದ ನೆನಪನ್ನು ಬಿಚಿಟ್ಟರು. ಪ್ರಯಾಗ್ ರಾಜ್ಗೂ ಮತ್ತು ನನಗೂ ತುಂಬಾ ಹಳೆಯ ಬಾಂಧವ್ಯವಿದೆ.
ಓದಿ: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಹಾಗೂ ಹಿರಿಯ ಅಧಿಕಾರಿಗಳಿಗೆ ಐಟಿ ಶಾಕ್
ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದಾಗ ಅಲಹಾಬಾದ್‌ನಿಂದ ಗಂಗಾಜಲವನ್ನು ತರಲು ನಮ್ಮ ತಂದೆ ನನನ್ನು ಒಬ್ಬನೇ ರೈಲಿನಲ್ಲಿ ಕಳುಹಿಸಿದ್ದರು. ಎಲ್ಲಾ ಕಷ್ಟಗಳ ನಡುವೆಯೂ ಗಂಗಾಜಲದೊಂದಿಗೆ ನಾನು ಚೆನ್ನೈಗೆ ತಲುಪಿದ್ದೆ. ಕಷ್ಟಗಳು ಏನೇ ಇರಲಿ ಎಂದು ಕಲಿತೆ.
ಆದರೆ, ನೀವು ಏನನ್ನಾದರೂ ಮಾಡುವ ಬಯಕೆಯನ್ನು ಹೊಂದಿದ್ರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಎಂದು ಎಸ್ಎಸ್ ರಾಜಮೌಳಿ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೂನಿಯರ್ ಎನ್ ಟಿಆರ್, ರಾಜಮೌಳಿಯಂತಹ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟದ ಸಂಗತಿ.
ನಾನು ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ, ರಾಜಮೌಳಿ ಅವರೊಂದಿಗೆ ಕೆಲಸ ಮಾಡುವುದು ವಿಶ್ವವಿದ್ಯಾಲಯದಲ್ಲಿ ಓದುವುದಕ್ಕೆ ಸಮಾನವಾಗಿದೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಆದರೆ, ಸೆಟ್‌ನಲ್ಲಿ ಮೋಜು ಮಾಡಲು ಸಮಯವಿರಲಿಲ್ಲ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಮಚರಣ್, ಈ ಚಿತ್ರ ನಮ್ಮ ಜೀವನದ ಅತ್ಯುತ್ತಮ ಚಿತ್ರ ಮತ್ತು ಕೆಲಸದ ದೃಷ್ಟಿಯಿಂದಲೂ ಉತ್ತಮವೆಂದು ಬಣ್ಣಿಸಿದರು.