ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ ರಾಧೆಯನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ಸಿನಿಮಾ ಪ್ರದರ್ಶಕರ ಸಂಘಕ್ಕೆ ಭರವಸೆ ನೀಡಿದ ನಂತರ ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.
ಪ್ರಭುದೇವ ನಿರ್ದೇಶನದ ರಾಧೆ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದ ರಿಲೀಸ್ ತಡವಾಗಿದೆ. ರಾಧೆ ಚಿತ್ರವನ್ನು ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಿಡುಗಡೆ ಮಾಡುವ ಸುದ್ದಿ ಹರಡಿದಾಗ ಸಿನೆಮಾ ಹಾಲ್ ಮಾಲೀಕರ ಸಂಘಗಳು ಸಲ್ಲುಗೆ ಪತ್ರ ಬರೆದು 2021ರ ಈದ್ ಹಬ್ಬದಂದು ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವಂತೆ ಕೋರಿ ಪತ್ರ ಬರೆದಿದ್ದರು. ಅವರ ವಿನಂತಿಯ ಮೇರೆಗೆ ಸಲ್ಲು ಭಾಯ್ ಈದ್ ಹಬ್ಬದಂದೇ ರಾಧೆ ಚಿತ್ರ ಮಂದಿಕ್ಕೆ ಬರುವುದಾಗಿ ಘೋಷಿಸಿದ್ದಾರೆ.
- " class="align-text-top noRightClick twitterSection" data="
">
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ತಮ್ಮ ರಾಧೆ ಚಿತ್ರದ ಆ್ಯಕ್ಷನ್ ಫೊಟೋ ಹಾಕಿ ಮೇ 13 ರಂದು ಈದ್ ಹಬ್ಬಕ್ಕೆ ಚಿತ್ರ ಮಂದಿರಕ್ಕೆ ಬರುವುದಾಗಿ ಪೋಸ್ಟ್ ಮಾಡಿದ್ದಾರೆ. ಪ್ರತಿ ವರ್ಷ ಈದ್ ಹಬ್ಬದಂದು ಸಲ್ಲು ಚಿತ್ರ ಬಿಡುಗಡೆಯಾಗುವುದು ಪಕ್ಕಾ ಅದೇ ಸಂಪ್ರದಾಯ ಇದೀಗ ಮತ್ತೆ ಮುಂದುವರೆದಿದೆ. ಈ ಹಿಂದೆ ಅವರ ಚಿತ್ರಗಳಾದ ಭಜರಂಗಿ ಭಾಯಿಜಾನ್, ದಬಾಂಗ್, ಕಿಕ್ ಮತ್ತು ಬಾಡಿಗಾರ್ಡ್ ಈದ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದವು.
- " class="align-text-top noRightClick twitterSection" data="
">
ರಾಧೆ ಚಿತ್ರದಲ್ಲಿ ದಿಶಾ ಪಟಾನಿ, ಜಾಕಿ ಶ್ರಾಪ್, ಝರಿನಾ ವಹಾಬ್ ಹಾಗೂ ರಣ್ದೀಪ್ ಹೂಡಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ , ಸೋಹೆಲ್ ಖಾನ್ ಪ್ರೊಡಕ್ಷನ್ ಹಾಗೂ ರೀಲ್ ಲೈಫ್ ಪ್ರೊಡಕ್ಷನ್ ಹಣ ಹೂಡಿಕೆ ಮಾಡಿದೆ.