ETV Bharat / sitara

ಸುಶಾಂತ್​ ಖಾತೆಯಿಂದ ಹಣ ವರ್ಗಾವಣೆ: ತಂದೆ ಕೆ.ಕೆ.ಸಿಂಗ್​ ಹೇಳಿಕೆ ದಾಖಲಿಸಿದ ಇಡಿ - ed probe in sushant case

ಸುಶಾಂತ್​ ಸಿಂಗ್​ ಅವರ ತಂದೆ ಕೆ.ಕೆ.ಸಿಂಗ್ ಹೇಳಿಕೆ ಪಡೆದ ಇಡಿ ಅಧಿಕಾರಿಗಳು, ಮಗನ ಬ್ಯಾಂಕ್ ಖಾತೆಯಿಂದಾದ ಹಣಕಾಸಿನ ವಹಿವಾಟು, ಸ್ಥಿರ ಠೇವಣಿ ಕುರಿತು ಅವರನ್ನು ಪ್ರಶ್ನಿಸಿದ್ದಾರೆ.

money laundering probe
ಸುಶಾಂತ್ ಮತ್ತು ತಂದೆ ಕೆ.ಕೆ.ಸಿಂಗ್
author img

By

Published : Aug 18, 2020, 1:27 PM IST

Updated : Aug 18, 2020, 1:37 PM IST

ನವದೆಹಲಿ: ಬಾಲಿವುಡ್​​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಸುಶಾಂತ್​ ಅವರ ತಂದೆ ಕೆ.ಕೆ.ಸಿಂಗ್​ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಸಿಂಗ್ ಅವರ ವಕೀಲ ವಿಕಾಸ್ ಸಿಂಗ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದರು. ಉನ್ನತ ಇಡಿ ಅಧಿಕಾರಿಗಳ ಪ್ರಕಾರ, ಮಗನ ಬ್ಯಾಂಕ್ ಖಾತೆಯಿಂದಾದ ಹಣಕಾಸಿನ ವಹಿವಾಟು, ಸ್ಥಿರ ಠೇವಣಿ ಮತ್ತು ಇತರ ಅಂಶಗಳ ಕುರಿತು ಕೆ.ಕೆ.ಸಿಂಗ್​ ಅವರನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್, ತಂದೆ ಇಂದ್ರಜಿತ್, ಸುಶಾಂತ್ ಸಿಎ ಸಂದೀಪ್ ಶ್ರೀಧರ್, ಸುಶಾಂತ್ ಮಾಜಿ ವ್ಯವಸ್ಥಾಪಕಿ ಶ್ರುತಿ ಮೋದಿ, ರಿಯಾ ಸಿಎ ರಿತೇಶ್ ಶಾ, ಸುಶಾಂತ್ ಅವರ ಫ್ಲಾಟ್​​​​ನ ಹಲವಾರು ವ್ಯಕ್ತಿಗಳ ಹೇಳಿಕೆಯನ್ನು ಇಡಿ ದಾಖಲಿಸಿದೆ.

ಸುಶಾಂತ್​ ಸ್ನೇಹಿತ ಸಿದ್ಧಾರ್ಥ್ ಪಿಥಾನಿ, ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ನಟನ ಇತರ ವೈಯಕ್ತಿಕ ಸಿಬ್ಬಂದಿಯನ್ನೂ ವಿಚಾರಣೆ ಮಾಡಲಾಗಿದೆ. ನಟನ ಸಹೋದರಿ ಮೀತು ಸಿಂಗ್ ಅವರ ಹೇಳಿಕೆಯನ್ನು ಮುಂಬೈನಲ್ಲಿ ಇಡಿ ಈ ಹಿಂದೆ ದಾಖಲಿಸಿಕೊಂಡಿತ್ತು.

ಕೆ.ಕೆ.ಸಿಂಗ್​ ಅವರು ನೀಡಿರುವ ದೂರಿನ ಮೇರೆಗೆ ಬಿಹಾರ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿಯು ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಜುಲೈ 25ರಂದು ಬಿಹಾರ ಪೊಲೀಸರಿಗೆ ನೀಡಿದ ದೂರಿನಲ್ಲಿ, ಸಿಂಗ್ ತನ್ನ ಮಗನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ ₹15 ಕೋಟಿ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. ಜುಲೈ 31ರಂದು ರಿಯಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಇಡಿ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

==

New Delhi: The Enforcement Directorate (ED) has recorded the statement of Bollywood actor Sushant Singh Rajput's father K. K.Singh in connection with its probe into money laundering aspects of the Bollywood actor's suicide.

Vikas Singh, a lawyer of Singh told IANS, "Yes, the ED has recorded the statement of the late actor's father."

According to top ED officials, Sushant's father was questioned about the financial transactions from the bank account of his son. The ED also asked about the fixed deposits of the late actor and other aspects.

The ED action comes almost days after it recorded the statement of several persons, including Sushant's girlfriend Rhea Chakraborty, her brother Showik, father Indrajit, Sushant's CA Sandeep Sridhar, Sushant's ex-manager and Rhea's manager Shruti Modi, Rhea's CA Ritesh Shah, Sushant's flatmate Siddharth Pithani, house manager Samuel Miranda and other personal staff of the late actor.

The ED has earlier also recorded the statement of the late actor's sister Meetu Singh in Mumbai.

The ED has registered a case of money laundering on the basis of the Bihar Police FIR filed on the complaint of K .K. Singh.

In his complaint to the Bihar Police on July 25, Singh had alleged that Rs 15 crore was withdrawn or transferred from his son's Kotak Mahindra Bank account, following which the ED registered a case under the PMLA against Rhea and her family members on July 31.

Last Updated : Aug 18, 2020, 1:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.