ETV Bharat / sitara

ಬಾಲಿವುಡ್​ ಡ್ರಗ್​ ಕೇಸ್​: ದೀಪಿಕಾ ಮ್ಯಾನೇಜರ್​​ ಕರಿಷ್ಮಾಗೆ ಮಧ್ಯಂತರ ರಿಲೀಫ್​!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಖಾಸಗಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಿಗೆ ಇದೀಗ ಮಧ್ಯಂತರ ರಿಲೀಫ್​ ನೀಡಲಾಗಿದೆ.

Karishma Prakash
Karishma Prakash
author img

By

Published : Nov 3, 2020, 5:43 PM IST

ಮುಂಬೈ: ಬಾಲಿವುಡ್​ ತಾರೆ ದೀಪಿಕಾ ಪಡುಕೊಣೆ ಅವರ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಅವರಿಗೆ ಎನ್​ಡಿಪಿಎಸ್​ನ ವಿಶೇಷ ನ್ಯಾಯಾಲಯ ನವೆಂಬರ್​ 7ರವರೆಗೆ ಮಧ್ಯಂತರ ರಿಲೀಫ್​ ನೀಡಿದೆ.

ಸುಶಾಂತ್​ ಸಿಂಗ್ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ವಿಚಾರದಲ್ಲಿ ಕರಿಷ್ಮಾ ಪ್ರಕಾರ ವಿಚಾರಣೆಗೊಳಪಟ್ಟಿದ್ದಾರೆ. ನವೆಂಬರ್​ 7ರವರೆಗೆ ಅವರ ಬಂಧನ ಮಾಡದಂತೆ ಆದೇಶ ಹೊರಡಿಸಲಾಗಿದ್ದು, ತನಿಖೆಯಲ್ಲಿ ಸಹಕಾರ ನೀಡುವಂತೆ ತಿಳಿಸಿದೆ.

ಬಾಲಿವುಡ್​ನ ಮಾದಕವಸ್ತು ಪ್ರಕರಣದಲ್ಲಿ ಎನ್​ಸಿಬಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್​ 27ರಂದು ಕೇಳಿಕೊಳ್ಳಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದರು. ಇದರ ಮಧ್ಯೆ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.

ಕಳೆದ ಕೆಲ ದಿನಗಳ ಹಿಂದೆ ಕರಿಷ್ಮಾ ಪ್ರಕಾಶ್ ನಿವಾಸದಲ್ಲಿ ಶೋಧಕಾರ್ಯ ನಡೆಸಿದ ಎನ್​ಸಿಬಿ ಅಧಿಕಾರಿಗಳಿಗೆ 1.7 ಗ್ರಾಂ ಚರಸ್ ಮತ್ತು ಎರಡು ಬಾಟಲ್ ಸಿಬಿಡಿ ಎಣ್ಣೆ ಸಿಕ್ಕಿತು. ಪ್ರಾಥಮಿಕ ತನಿಖೆಯಿಂದ ಕರಿಷ್ಮಾ ಪ್ರಕಾಶ್​ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕವಿರಬಹುದು ಎಂಬ ಕಾರಣದಿಂದ ಸಮ್ಮನ್ಸ್ ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.