ಮುಂಬೈ: ವಾಣಿಜ್ಯ ನಗರಿಯಲ್ಲಿ ತೌಕ್ತೆ ಅಬ್ಬರಕ್ಕೆ ಸಾಕಷ್ಟು ಅನಾಹುತ ಸಂಭವಿಸಿದೆ. ಜನ ಜೀವನವೂ ಅಸ್ತವ್ಯಸ್ತಗೊಂಡಿದೆ. ಇಂತಹ ಸಮಯದಲ್ಲಿ ನಟಿಯೊಬ್ಬರು ಚೆಂಡಮಾರುತದ ಮಳೆಯಲ್ಲಿ ನೃತ್ಯ ಮಾಡಿ ಫೋಟೋ ಶೂಟ್ ಮಾಡಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಂಕಷ್ಟದ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದ್ದ ನಟಿ ಈ ರೀತಿ ವರ್ತಿಸಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
- " class="align-text-top noRightClick twitterSection" data="
">
ಟೆಲಿವಿಷನ್ ಶೋ 'ದಿಯಾ ಔರ್ ಬಾತಿ' ಖ್ಯಾತಿಯ ನಟಿ ದೀಪಿಕಾ ಸಿಂಗ್ ಮಂಗಳವಾರ ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಚಿತ್ರಗಳ ಸರಮಾಲೆ ಮತ್ತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಮತ್ತು ಫೋಟೋಗಳಲ್ಲಿ ಅವರು ರಸ್ತೆಯ ಮಧ್ಯೆ ಉರುಳಿ ಬಿದ್ದ ಮರದ ಬಳಿ ಮತ್ತು ಮಳೆಯಲ್ಲಿ ಡ್ಯಾನ್ಸ್ ಮಾಡಿರುವುದು ಕಂಡು ಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ತನ್ನ ಇತ್ತೀಚಿನ ಪೋಸ್ಟ್‌ಗಳಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸುಮಾರು ಎರಡು ವರ್ಷಗಳಿಂದ ಸಣ್ಣ ಪರದೆಯಿಂದ ದೂರದಲ್ಲಿರುವ ದೀಪಿಕಾ, ತಮ್ಮ ಅಭಿಮಾನಿಗಳನ್ನು ಡ್ಯಾನ್ಸ್ ಮತ್ತು ಅದ್ಭುತ ಚಿತ್ರಗಳ ಹಾಕುವ ಮೂಲಕ ರಂಜಿಸುತ್ತಿದ್ದರು. ಆದ್ರೆ ಇತ್ತೀಚಿನ ಫೋಟೋ ಮತ್ತು ವಿಡಿಯೋದಿಂದ ಅಭಿಮಾನಿಗಳು ಬೇಸರವಾಗಿದ್ದಾರೆ.
- " class="align-text-top noRightClick twitterSection" data="
">
ಚಂಡಮಾರತದಲ್ಲಿ ಅನೇಕ ಜನರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನೀವು ಮಳೆಯಲ್ಲಿ ಡ್ಯಾನ್ಸ್ ಮಾಡುವುದು ಸೂಕ್ತವೆನಿಸುತ್ತಿಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ಮನೆಯಲ್ಲಿರುವುದು ಒಳ್ಳೆಯದು. ಅನಾರೋಗ್ಯಕ್ಕೆ ಒಳಗಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳುವಂತೆ ನೆಟಿಜನ್ಸ್ ದೀಪಿಕಾಗೆ ಸೂಚಿಸಿದ್ದಾರೆ. ಕಳೆದ ಜೂನ್‌ನಲ್ಲಿ ದೀಪಿಕಾ ತಾಯಿ ಮತ್ತು ಅಜ್ಜಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಸಹಾಯಕ್ಕಾಗಿ ದೆಹಲಿ ಸರ್ಕಾರವನ್ನು ಕೋರಿದ್ದರು.
- " class="align-text-top noRightClick twitterSection" data="
">
2017 ರಲ್ಲಿ ದೀಪಿಕಾ ತನ್ನ ಮೊದಲ ಹೆರಿಗೆಯ ನಂತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದರಿಂದ ದೂರವಿದ್ದರು. ಬಳಿಕ ಅವರ ನಟನೆ ಕೆಲವು ಟಿವಿ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು.