ETV Bharat / sitara

ಜಾಕಿಚಾನ್ ಫೋಟೋ ಜೊತೆ ಹಳೆಯ ನೆನಪು ಹಂಚಿಕೊಂಡ ದಿಶಾ ಪಟಾನಿ - Martial artist Jackie Chan

'ಕುಂಗ್ ಫು ಯೋಗ' ಚಿತ್ರೀಕರಣದ ವೇಳೆ ನಟ ಜಾಕಿಚಾನ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಜನವರಿ 28 ಕ್ಕೆ 3 ವರ್ಷಗಳು ತುಂಬಿವೆ.

Disha Patani
ಜಾಕಿಚಾನ್ ಜೊತೆ ದಿಶಾ ಪಟಾನಿ
author img

By

Published : Jan 29, 2021, 1:09 PM IST

ಬಾಲಿವುಡ್ ನಟಿ ದಿಶಾ ಪಟಾನಿ ತಾವು ನಟ, ಫಿಲ್ಮ್​ ಮೇಕರ್, ಮಾರ್ಷಲ್ ಆರ್ಟ್ ಕಲಾವಿದ ಜಾಕಿಚಾನ್ ಜೊತೆ ಇರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2017 ರಲ್ಲಿ ಬಿಡುಗಡೆಯಾದ ಕುಂಗ್​ ಫು ಯೋಗ ಚಿತ್ರದಲ್ಲಿ ದಿಶಾ, ಜಾಕಿಚಾನ್ ಜೊತೆ ನಟಿಸಿದ್ದರು. ಜನವರಿ 28 ಕ್ಕೆ ಈ ಸಿನಿಮಾ ಮೂರು ವರ್ಷಗಳನ್ನು ಪೂರೈಸಿದೆ.

ಜಾಕಿಚಾನ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿರುವ ದಿಶಾ,"ಕುಂಗ್ ಫು ಯೋಗ ಚಿತ್ರಕ್ಕೆ 4 ವರ್ಷಗಳ ಸಂಭ್ರಮ, ಲವ್ ಯು ಟಗ್ಗು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಾರ್ಟ್ ಎಮೋಜಿಯನ್ನು ಸೇರಿಸಿದ್ದಾರೆ. ಈ ಫೋಟೋಗೆ ಇದುವರೆಗೂ 8 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ಸ್ ನೀಡಿದ್ದಾರೆ. ದಿಶಾ ಬಾಯ್​ಫ್ರೆಂಡ್ ಎನ್ನಲಾದ ಟೈಗರ್ ಶ್ರಾಫ್ ಕೂಡಾ ಈ ಫೋಟೋವನ್ನು ಲೈಕ್ ಮಾಡಿದ್ದಾರೆ. ಇದರೊಂದಿಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಾಕಿಚಾನ್ ಜೊತೆ ಮತ್ತೊಂದು ಫೋಟೋ ಹಂಚಿಕೊಂಡಿರುವ ದಿಶಾ ಪಟಾನಿ "ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ" ಎಂದು ಬರೆದುಕೊಂಡಿದ್ದಾರೆ. 'ಕುಂಗ್ ಫು ಯೋಗ' ಚಿತ್ರದಲ್ಲಿ ದಿಶಾ ಪಟಾನಿ ಇಂಡಿಯನ್ ಪ್ರೊಫೆಸರ್ ಅಶ್ಮಿತಾ ಪಾತ್ರದಲ್ಲಿ ನಟಿಸಿದ್ದಾರೆ. ಜಾಕಿಚಾನ್ ಆರ್ಕಿಯಾಲಜಿ ಪ್ರೊಫೆಸರ್ ಆಗಿ ನಟಿಸಿದ್ದಾರೆ.

Disha Patani
ದಿಶಾ ಪಟಾನಿ ಇನ್ಸ್ಟಾಗ್ರಾಮ್ ಸ್ಟೋರಿ

ಇದನ್ನೂ ಓದಿ: ಸಿಂಪಲ್ ಫೋಟೋಶೂಟ್ ಮೂಲಕ ಮತ್ತೆ ಅಭಿಮಾನಿಗಳ ಮನಸ್ಸು ಕದ್ದ ಕಾಜೊಲ್​​

ದಿಶಾ ಪಟಾನಿ ಕರಿಯರ್ ಬಗ್ಗೆ ಹೇಳುವುದಾದರೆ ದಿಶಾ ಪಟಾನಿ, ಸಲ್ಮಾನ್ ಖಾನ್ ಜೊತೆ 'ರಾಧೆ' ಚಿತ್ರದಲ್ಲಿ ಜೊತೆಯಾಗಿದ್ದಾರೆ. ಈಗಷ್ಟೇ ಈ ಸಿನಿಮಾ ಚಿತ್ರೀಕರಣ ಮುಗಿದಿದ್ದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ಜೊತೆಗೆ ಮೋಹಿತ್ ಸೂರಿ ನಿರ್ದೇಶನದಲ್ಲಿ 'ಏಕ್ ವಿಲನ್ 2' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.