ETV Bharat / sitara

ದಿಲೀಪ್ ಕುಮಾರ್ ರೂಂನಿಂದ ಹಾಲ್​ವರೆಗೂ ಮಾತ್ರ ಓಡಾಡಬಲ್ಲರು: ಪತಿ ಆರೋಗ್ಯದ ಮಾಹಿತಿ ಹಂಚಿಕೊಂಡ ಸೈರಾ ಬಾನು - ದಿಲೀಪ್ ಕುಮಾರ್​​ಗೆ ದಾದಾ ಸಾಹೇಬ್ ಪಾಲ್ಕೆ

ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಅವರ ಆರೋಗ್ಯ 'ಚೆನ್ನಾಗಿಲ್ಲ' ಎಂದು ಅವರ ಪತ್ನಿ ಸೈರಾ ಬಾನು ಹೇಳಿದ್ದಾರೆ. ಅಭಿಮಾನಿಗಳು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್
ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್
author img

By

Published : Dec 7, 2020, 3:00 PM IST

ಮುಂಬೈ: ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಪತ್ನಿ ಸೈರಾ ಬಾನು ಹೇಳಿದ್ದಾರೆ. ಕೋವಿಡ್​-19 ಆರಂಭವಾದಗಿಂದ ಅವರು ವೈರಸ್​​ನ ಭೀತಿಯಿಂದ ಕ್ವಾರಂಟೈನ್​ನಲ್ಲಿದ್ದರು.

"ನಾನು ದಿಲೀಪ್ ಸಾಬ್​ರನ್ನು ಒಂದು ವರ್ಷದಿಂದ ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೇನೆ. ಇದನ್ನು ನಾನು ಹೊಗಳಿಕೆಗಾಗಿ ಮಾಡುತ್ತಿಲ್ಲ, ಬದಲಿಗೆ ಪತ್ನಿಯಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಅವರನ್ನು ಸ್ಪರ್ಶಿಸುವುದೇ ಮತ್ತು ಅಪ್ಪಿಕೊಳ್ಳುವುದೇ ನನಗೆ ಸಂತೋಷಕರ ವಿಷಯವಾಗಿದೆ. ನಾನು ಅವರನ್ನು ಅರಾಧಿಸುತ್ತೇನೆ ಮತ್ತು ಅವರೇ ನನ್ನ ಉಸಿರು ಎಂದು ಸೈರಾ ಬಾನು ಹೇಳಿದ್ದಾರೆ.

ಪ್ರತಿದಿನ ನಾನು ದೇವರಲ್ಲಿ ಅವರು ಆದಷ್ಟೂ ಬೇಗ ಗುಣಮುಖರಾಗಲೆಂದು ಬೇಡಿಕೊಳ್ಳುತ್ತಿದ್ದೇನೆ. ಅವರ ಆರೋಗ್ಯ ಚೆನ್ನಾಗಿಲ್ಲ, ತುಂಬಾ ದುರ್ಬಲರಾಗಿದ್ದಾರೆ. ಕೆಲವೊಮ್ಮೆ ಅವರು ಹಾಲ್​ನಿಂದ ರೂಮ್​ ತನಕ ಅಷ್ಟೇ ಓಡಾಡುತ್ತಾರೆ. ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಸೈರಾ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ:ತಲೈವಾ ರಾಜಕೀಯ ಎಂಟ್ರಿ...ಬೆಂಗಳೂರಿಗೆ ತೆರಳಿ ಅಣ್ಣನ ಆಶೀರ್ವಾದ ಪಡೆದ ರಜನಿಕಾಂತ್​​​​

ಈ ಖ್ಯಾತ ನಟನಿಗೆ 1994ರಲ್ಲಿ ದಾದಾ ಸಾಹೇಬ್ ಪಾಲ್ಕೆ, 2015ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿಲೀಪ್ ಕುಮಾರ್ 1998ರಲ್ಲಿ ಕೊನೆಯಬಾರಿಗೆ ಕಿಲಾ ಚಿತ್ರದಲ್ಲಿ ನಟಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.