ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟಿ ದಿಯಾ ಮಿರ್ಜಾ ಫೆಬ್ರವರಿ 2021ರಲ್ಲಿ ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾಗಿ, ಏಪ್ರಿಲ್ನಲ್ಲಿ ತಾಯಿಯಾಗುತ್ತಿರುವುದಾಗಿ ಘೋಷಿಸಿದ್ದರು. ಗಂಡು ಮಗುವಿಗೆ ಜನ್ಮ ನೀಡಿರುವ ಖಷಿಯಲ್ಲಿರುವ ದಿಯಾ, ಆ ವೇಳೆ ಎದುರಾದ ಸಮಸ್ಯೆಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ದಿಯಾ ಮಿರ್ಜಾ ಮೊದಲ ಮದುವೆಗೆ ವಿಚ್ಛೇದನ ಕೊಡುವ ಮೂಲಕ 11 ವರ್ಷದ ದಾಂಪತ್ಯಕ್ಕೆ ಅಂತ್ಯ ಹೇಳಿದ್ದರು. ಕಳೆದ ಫೆಬ್ರವರಿ 15 ರಂದು ದಿಯಾ ಅವರು ಉದ್ಯಮಿ ವೈಭವ್ ರೇಖಿಯೊಂದಿಗೆ ಎರಡನೇ ಮದುವೆಯಾಗಿದ್ದರು.
ಬಳಿಕ ತಾವು ತಾಯಿ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈಗ ಗಂಡು ಮಗುವಿ ಆರೈಕೆಯಲ್ಲಿ ತೊಡಗಿದ್ದಾರೆ. ಅವ್ಯಾನ್ ಆಜಾದ್ ರೇಖಿ ಎಂದು ಮಗುವಿಗೆ ಹೆಸರಿಡಲಾಗಿದೆ.
ಗರ್ಭಾವಸ್ಥೆಯಲ್ಲಿನ ತೊಂದರೆಗಳಿಂದಾಗಿ ಅವಧಿಗೂ ಮುನ್ನವೇ ಮಗು ಜನಿಸಿದೆ. ಕೋವಿಡ್ ಅಬ್ಬರದ ವೇಳೆ ಉಂಟಾದ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
- " class="align-text-top noRightClick twitterSection" data="
">
''2021ಕ್ಕೆ ಧನ್ಯವಾದಗಳು, ನಾನು ತಾಯಿಯಾಗಿದ್ದೇನೆ, ಸಾವಿನ ಕದ ತಟ್ಟಿದ ಅನುಭವದ ಜೊತೆಗೆ ಈ ವರ್ಷ ಬಹಳಾನೇ ಸಂತಸ ನೀಡಿದೆ. ಹಲವು ಪರೀಕ್ಷೆಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದೇನೆ.
ಜೊತೆಗೆ ಹಲವು ಪಾಠ ಕಲಿತಿದ್ದೇನೆ, ಕಠಿಣ ಸಮಯದಲ್ಲಿ ದೊಡ್ಡ ಕಲಿಕೆಯಾಗಿದೆ, ಪ್ರತಿದಿನ ಖುಷಿಯಾಗಿರಿ, ಕಲಿಯುತ್ತಾ ಇರಿ, ಕೃತಜ್ಞರಾಗಿರಿ ಎಂದು ಬರೆದು ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ್ದಾರೆ.
ನನ್ನ ಗರ್ಭಾವಸ್ಥೆಯ ಐದನೇ ತಿಂಗಳಲ್ಲಿ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಗರ್ಭಾವಸ್ಥೆಯಲ್ಲಾದ ತೊಂದರೆಯಿಂದ ಹಲವು ಆರೋಗ್ಯ ಪರೀಕ್ಷೆಗೆ ಒಳಗಾದೆ. ಅವಧಿಗೂ ಮುನ್ನವೇ ಮಗುವಿಗೆ ಜನ್ಮ ನೀಡಬೇಕಾಯಿತು ಎಂದು ದಿಯಾ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸೋನು ಸೂದ್ ಜೊತೆ Etv Bharat Exclusive: ರಾಜಕೀಯ ಸೇರುವ ಬಗ್ಗೆ ಹೇಳಿದ್ದೇನು?
ಒಟ್ಟಾರೆ ತಾಯ್ತನ ಅನುಭವನ್ನು ಉಲ್ಲೇಖಿಸುತ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.