ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಹೊಡೆದು ಹಾಕಿದರು ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ತಮ್ಮ ಇನ್ಸ್‌ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದ್ರ ಜೊತೆಗೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರೆಂದು ಬಣ್ಣಿಸಿದ್ದು ನಟಿಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
-
Filed a Police Complaint agnst #KanganaRanaut for her disrespectful, contemptuous & insulting post on Instagram for calling whole Sikh Community as Khalistani terrorists & by saying that PM Indira Gandhi had crushed them as mosquitoes @CPDelhi @CPMumbaiPolice @ANI @thetribunechd pic.twitter.com/fZ50gxGcjS
— Manjinder Singh Sirsa (@mssirsa) November 20, 2021 " class="align-text-top noRightClick twitterSection" data="
">Filed a Police Complaint agnst #KanganaRanaut for her disrespectful, contemptuous & insulting post on Instagram for calling whole Sikh Community as Khalistani terrorists & by saying that PM Indira Gandhi had crushed them as mosquitoes @CPDelhi @CPMumbaiPolice @ANI @thetribunechd pic.twitter.com/fZ50gxGcjS
— Manjinder Singh Sirsa (@mssirsa) November 20, 2021Filed a Police Complaint agnst #KanganaRanaut for her disrespectful, contemptuous & insulting post on Instagram for calling whole Sikh Community as Khalistani terrorists & by saying that PM Indira Gandhi had crushed them as mosquitoes @CPDelhi @CPMumbaiPolice @ANI @thetribunechd pic.twitter.com/fZ50gxGcjS
— Manjinder Singh Sirsa (@mssirsa) November 20, 2021
ಈ ಕುರಿತು, ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೆಹಲಿ ಸಿಖ್ ಗುರುದ್ವಾರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರೂ ಆಗಿರುವ ಸಿರ್ಸಾ, ಕಂಗನಾ ಅವರು ಉದ್ದೇಶಪೂರ್ವಕವಾಗಿಯೇ ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿಯಂತೆ ಬಿಂಬಿಸಿದ್ದಾರೆ ಎಂದಿದ್ದಾರೆ.
ಕಂಗನಾ ಇನ್ಸ್‌ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದೇನು?
'ಖಲಿಸ್ತಾನಿಗಳು ಇವತ್ತು ಸರ್ಕಾರವನ್ನು ಬಾಗುವಂತೆ ಮಾಡಿರಬಹುದು. ಆದ್ರೆ ಈ ಸಂದರ್ಭದಲ್ಲಿ ಒಬ್ಬ ಮಹಿಳೆಯನ್ನು ನಾವು ಮರೆಯಬಾರದು. ದೇಶದ ಏಕಮಾತ್ರ ಮಹಿಳಾ ಪ್ರಧಾನಿ(ಇಂದಿರಾ ಗಾಂಧಿ) ಅವರನ್ನು (ಖಲಿಸ್ತಾನಿ) ತಮ್ಮ ಚಪ್ಪಲಿಯಡಿ ಹಾಕಿ ತುಳಿದು ಸಾಯಿಸಿದ್ದರು. ದೇಶಕ್ಕೆ ಅವರು ಕೊಟ್ಟ ಕಷ್ಟ ಕಾರ್ಪಣ್ಯಗಳ ಹೊರತಾಗಿಯೂ, ಆಕೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಅವರನ್ನು (ಖಲಿಸ್ತಾನಿಗಳನ್ನು) ಸೊಳ್ಳೆಗಳಂತೆ ಬಡಿದು ಹಾಕಿದರು. ಆದರೆ ಈ ಸಂದರ್ಭದಲ್ಲೂ ಅವರು ದೇಶ ಒಡೆದುಹೋಗದಂತೆ, ಒಗ್ಗಟ್ಟು ಮುರಿಯದಂತೆ ನೋಡಿಕೊಂಡರು. ಇವತ್ತಿಗೂ ಕೂಡಾ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ, ಅವರಿಗೀಗ ಅಂಥ ಗುರುವೊಬ್ಬ ಬೇಕಿದೆ'.
ಇದನ್ನೂ ಓದಿ: ದೇಶಕ್ಕೆ ಇಂದಿರಾ ಗಾಂಧಿಯಂತಹ ಪ್ರಧಾನಿ ಅಗತ್ಯವಿದೆ.. ನಟಿ ಕಂಗನಾ ರಣಾವತ್