ETV Bharat / sitara

5ಜಿ ಅನುಷ್ಠಾನ: ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್..! - 5ಜಿ ಅನುಷ್ಠಾನ

5 ಜಿ ಅನುಷ್ಠಾನ ತಡೆ ಕೋರಿ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಜೆ.ಆರ್ ಮಿಧಾ ಅವರ ಪೀಠವು ಜೂಹಿ ಚಾವ್ಲಾಗೆ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

JUHI C
JUHI C
author img

By

Published : Jun 4, 2021, 5:20 PM IST

ನವದೆಹಲಿ: 5 ಜಿ ಅನುಷ್ಠಾನ ತಡೆ ಕೋರಿ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಜೆ.ಆರ್ ಮಿಧಾ ಅವರ ಪೀಠವು ಜೂಹಿ ಚಾವ್ಲಾಗೆ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಭಾರತದಲ್ಲಿ 5 ಜಿ ಅನುಷ್ಠಾನದ ವಿರುದ್ಧ ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. 5 ನೇ ತಲೆಮಾರಿನ (5 ಜಿ) ವೈರ್‌ಲೆಸ್ ನೆಟ್‌ವರ್ಕ್ ಮುಂದಿನ ಕೆಲವು ವರ್ಷಗಳಲ್ಲಿ ವಿಶ್ವದಾದ್ಯಂತ ಜಾರಿಗೆ ಬರಲಿದೆ. 5ಜಿ ಅನುಷ್ಠಾನದ ವಿರುದ್ಧ ಈಗಾಗಲೇ ಜಗತ್ತಿನ ಹಲವೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. 5ಜಿ ನಂತರದ ಕೆಟ್ಟ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನದ ಬಳಕೆ ವಿರೋಧಿಸಲಾಗುತ್ತಿದೆ.

ಈಗ ಭಾರತದಲ್ಲಿ ಪರಿಸರ ಕಾರ್ಯಕರ್ತೆಯೂ ಆಗಿರುವ ನಟಿ ಜೂಹಿ ಚಾವ್ಲಾ 5 ಜಿ ಅನುಷ್ಠಾನದ ವಿರುದ್ಧ ಮೊಕದ್ದಮೆ ಹೂಡಿದ್ದರು. ತಾಂತ್ರಿಕ ಪ್ರಗತಿಗೆ ನಾನು ವಿರುದ್ಧವಾಗಿಲ್ಲ. ಆದರೆ, ಇದರ ವಿಕಿರಣವು ಅತ್ಯಂತ ಹಾನಿಕಾರಕ ಮತ್ತು ಜನರ ಆರೋಗ್ಯ ಮತ್ತು ಸುರಕ್ಷತೆಗೆ ಹಾನಿಕಾರಕವಾಗಿದೆ ಎಂದು ನಂಬಲು ನಮಗೆ ಸಾಕಷ್ಟು ಕಾರಣಗಳಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ವೈರ್‌ಫ್ರೀ ಗ್ಯಾಜೆಟ್‌ಗಳು ಮತ್ತು ನೆಟ್‌ವರ್ಕ್ ಸೆಲ್ ಟವರ್‌ಗಳಿಂದ ಆರ್​​ಎಫ್​ ವಿಕಿರಣದ ಬಗ್ಗೆ ನಮ್ಮದೇ ಆದ ಸಂಶೋಧನೆ ನಡೆಸಲಾಗಿದೆ. ಈ ಅಧ್ಯಯನಗಳನ್ನು ಮಾಡಿದ ನಂತರ, ವಿಕಿರಣವು ಅತ್ಯಂತ ಹಾನಿಕಾರಕವಾಗಿದೆ ಎಂದು ನಂಬಲು ನಮಗೆ ಸಾಕಷ್ಟು ಕಾರಣಗಳಿವೆ ಮತ್ತು ಜನರ ಆರೋಗ್ಯ ಮತ್ತು ಸುರಕ್ಷತೆಗೆ ಹಾನಿಕಾರಕ ಎಂದು ತಿಳಿಸಿದ್ದರು. ಈ 5 ಜಿ ತಂತ್ರಜ್ಞಾನವು ಮಾನವಕುಲ, ಪ್ರಾಣಿಗಳು ಮತ್ತು ಪ್ರತಿಯೊಂದು ರೀತಿಯ ಜೀವಿಗಳು, ಸಸ್ಯ ಮತ್ತು ಪ್ರಾಣಿಗಳಿಗೆ ಸುರಕ್ಷಿತವಾಗಿದೆ ಎಂದು ಸಾರ್ವಜನಿಕರಿಗೆ ಪ್ರಮಾಣೀಕರಿಸುವಂತೆ ವಕೀಲ ದೀಪಕ್ ಖೋಸ್ಲಾ ಅವರ ಮೂಲಕ ಮನವಿ ಸಲ್ಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.