ನವದೆಹಲಿ : ಕೊರೊನಾ ಲಾಕ್ಡೌನ್ ಬೇಸರವನ್ನು ದೂರ ಮಾಡುತ್ತಿರುವ 'ಸಂಗೀತ'ಕ್ಕೆ ಪದ್ಮಾವತ್ ಬೆಡಗಿ ದೀಪಿಕಾ ಪಡುಕೋಣೆ ಧನ್ಯವಾದ ಅರ್ಪಿಸಿದ್ದಾರೆ.
- " class="align-text-top noRightClick twitterSection" data="
">
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯಾನೋವೊಂದರ ಫೋಟೋ ಪೋಸ್ಟ್ ಮಾಡಿರುವ ಡಿಪ್ಪಿ ತಮ್ಮ ಜೀವನದ ಖುಷಿಗೆ ಕಾರಣವಾಗಿರುವ ಸಂಗೀತಕ್ಕೆ 'ಥ್ಯಾಂಕ್ಯೂ ಮ್ಯೂಸಿಕ್' ಅಂತಾ ಶೀರ್ಷಿಕೆ ನೀಡಿದ್ದಾರೆ.
ಸಂಗೀತವಿಲ್ಲದಿದ್ದರೆ ನನ್ನ ಜೀವನವೇ ಅಪೂರ್ಣವೆಂದಿರುವ ದೀಪಿಕಾ, ಮ್ಯೂಸಿಕ್‌ಗೆ ಧನ್ಯವಾದ ಹೇಳಿದ್ದಾರೆ. ಹಾಡುಗಳಿಗೆ, ಅವು ತರುತ್ತಿರುವ ಸಂತೋಷಕ್ಕೆ ಧನ್ಯವಾದಗಳು ಎಂದಿದ್ದಾರೆ. ಸಂಗೀತ, ನೃತ್ಯ ಅಥವಾ ಹಾಡುಗಳೇ ಇಲ್ಲದೇ ಯಾರು ಜೀವನ ಮಾಡಲು ಸಾಧ್ಯ? ಅದಿಲ್ಲದೆ ಯಾರು ಬದುಕಬಲ್ಲರು?ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಎಂದು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.
ಲಾಕ್ಡೌನ್ನಿಂದ ಶೂಟಿಂಗ್ ಇಲ್ಲದೇ ಮನೆಯಲ್ಲೇ ಇರುವ ದೀಪಿಕಾ ಲಾಕ್ಡೌನ್ ಆದಾಗಿಂದ ಇನ್ಸ್ಸ್ಟಾಗ್ರಾಮ್ದಲ್ಲಿ ಸಖತ್ ಇಂಟ್ರೆಸ್ಟಿಂಗ್ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಆ ಮೂಲಕ ಲಾಕ್ಡೌನ್ ದಿನಗಳಲ್ಲೂ ಹೆಚ್ಚು ಖುಷಿಯ ಕ್ಷಣಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.