ETV Bharat / sitara

MAMI ಅಧ್ಯಕ್ಷೆ ಸ್ಥಾನಕ್ಕೆ ದೀಪಿಕಾ ಪಡುಕೋಣೆ ರಾಜೀನಾಮೆ

ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ (MAMI) ಅಧ್ಯಕ್ಷೆ ಸ್ಥಾನದಿಂದ ನಟಿ ದೀಪಿಕಾ ಪಡುಕೋಣೆ ಕೆಳಗಿಳಿದಿದ್ದಾರೆ.

deepika padukone resigns from mami
MAMI ಅಧ್ಯಕ್ಷೆ ಸ್ಥಾನಕ್ಕೆ ದೀಪಿಕಾ ಪಡುಕೋಣೆ ರಾಜೀನಾಮೆ
author img

By

Published : Apr 12, 2021, 2:11 PM IST

ಹೈದರಾಬಾದ್​: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಕೆಲಸದ ಒತ್ತಡದ ಕಾರಣ ನೀಡಿ ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ (MAMI) ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

deepika padukone resigns from mami
MAMI ಅಧ್ಯಕ್ಷೆ ಸ್ಥಾನಕ್ಕೆ ದೀಪಿಕಾ ಪಡುಕೋಣೆ ರಾಜೀನಾಮೆ

ಸೋಮವಾರ ಬೆಳಗ್ಗೆ ದೀಪಿಕಾ ಅವರು MAMI ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸುವ ಮುನ್ನ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸುಮಾರು ಎರಡು ವರ್ಷಗಳ ಕಾಲ ಇದರ ಹೆಡ್ ಆಗಿ ಸೇವೆ ಸಲ್ಲಿಸಿದ್ದೇನೆ. ಮಾಮಿಯಲ್ಲಿನ ಕೆಲಸವು ನನಗೆ ತೃಪ್ತಿಕೊಟ್ಟಿದೆ ಮತ್ತು ಈ ಅಕಾಡೆಮಿಯೊಂದಿಗೆ ಕಳೆದ ಕಾಲಾವಧಿ ಜೀವಮಾನದಲ್ಲಿ ನೆನಪಿನಲ್ಲಿ ಉಳಿಯುವಂಥದ್ದು ಎಂದು ಹೇಳಿದ್ದಾರೆ.

ಮಾಮಿ ಮಂಡಳಿಯಲ್ಲಿರುವುದು ಮತ್ತು ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುವುದು ಒಂದು ಒಳ್ಳೆಯ ಅನುಭವವಾಗಿದೆ. ಒಬ್ಬ ಕಲಾವಿದೆಯಾಗಿ, ನನ್ನ ಎರಡನೇ ಮನೆಯಾದ ಮುಂಬೈಗೆ ಪ್ರಪಂಚದಾದ್ಯಂತದ ಸಿನನಿಮಾ ಮತ್ತು ಪ್ರತಿಭೆಗಳನ್ನು ತರಲು ಉತ್ತೇಜನಕಾರಿಯಾಗಿದೆ. ಪ್ರಸ್ತುತ ಸಿನಿಮಾ ಪ್ರಾಜೆಕ್ಟ್​ಗಳಿಂದಾಗಿ MAMI ಗೆ ಕಾರ್ಯನಿರ್ವಹಿಸಲು ಸಮಯ ಸಾಕಾಗುತ್ತಿಲ್ಲ. ಹೀಗಾಗಿ ನಾನು ಇದರಿಂದ ಹೊರಬರುತ್ತಿದ್ದೇನೆ ಎಂದು ದೀಪಿಕಾ ತಿಳಿಸಿದ್ದಾರೆ.

2019 ರಲ್ಲಿ ಕಿರಣ್ ರಾವ್ ಬದಲಿಗೆ ದೀಪಿಕಾ ಅವರನ್ನು (MAMI) ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.