ಹೈದರಾಬಾದ್: ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಗೆಹ್ರಿಯಾನ್ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದರು. ಸಿನಿಮಾದ ಬೆನ್ನಲ್ಲೇ ಇದೀಗ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ದೀಪಿಕಾ ಪಡುಕೋಣೆ ಕಿತ್ತಳೆ ಬಣ್ಣದ ದಿರಿಸಿನಲ್ಲಿದ್ದು, ನೀರಿನ ಅಡಿ ಕುಳಿತು ತೆಗೆದುಕೊಂಡ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ, 'ಕೆಲವೊಮ್ಮೆ ಸುರಕ್ಷಿತ ಸ್ಥಳವು ನೀರಿನ ಅಡಿಯಲ್ಲಿದೆ' ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಈ ಸಾಲನ್ನು ಲೇಖಕಿ ಮರಿಸಾ ರೀಚಾರ್ಡ್ ಅವರ ಕಾದಂಬರಿಯಾದ 'ಅಂಡರ್ ವಾಟರ್' ನಿಂದ ಎರವಲು ಪಡೆದಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರ ಫೈಟರ್ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.