ಮುಂಬೈ (ಮಹಾರಾಷ್ಟ್ರ): ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಪ್ಯಾನ್ - ಇಂಡಿಯಾ ಚಿತ್ರದಲ್ಲಿ ರಾಮ್ ಚರಣ್ ತೇಜನಿಗೆ ನಾಯಕಿಯಾಗಿ ನಟಿ ಕಿಯಾರ ಅಡ್ವಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ಇಂದು ಘೋಷಿಸಿದ್ದಾರೆ. ಅಡ್ವಾಣಿ ಮತ್ತು ಚರಣ್ 2019ರ ತೆಲುಗು ಆಕ್ಷನ್ ಚಲನಚಿತ್ರ ವಿನಯ ವಿಧೇಯ ರಾಮ ನಂತರ ಈ ಸಿನೆಮಾದಲ್ಲಿ ಮತ್ತೆ ಒಂದಾಗಲಿದ್ದಾರೆ.
ನಿರ್ಮಾಪಕ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಕಿಯಾರ ಅಡ್ವಾಣಿಯ 29ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಘೋಷಣೆ ಮಾಡಿದೆ. "ಪ್ರತಿಭಾನ್ವಿತ ಸುಂದರಿ ಕಿಯಾರ ಅಡ್ವಾಣಿ ಈ ಅತ್ಯಾಕರ್ಷಕ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ" ಎಂದು #HappyBirthdayKiaraAdvani #RC15 #SVC50 ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಲಾಗಿದೆ.
- " class="align-text-top noRightClick twitterSection" data="
">
ಕಿಯಾರ ಅಭಿನಯದ ಬಯೋಪಿಕ್ ಶೇರ್‌ಶಾ ಬಿಡುಗಡೆಗೆ ಸಿದ್ಧವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಅನುಭವಿ ಕಲಾವಿದರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಮತ್ತು ಆತಂಕಕ್ಕೊಳಗಾಗಿದ್ದೇನೆ, ಚಿತ್ರೀಕರಣ ಆರಂಭಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕಿಯಾರ ಹೇಳಿದ್ದಾರೆ.
ಚಿತ್ರ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ಮತ್ತು ಶಿರೀಶ್ ಜಂಟಿಯಾಗಿ ನಿರ್ಮಿಸಲಿದ್ದಾರೆ.
-
Joining us on this super exciting journey is the talented and gorgeous @advani_kiara !
— Sri Venkateswara Creations (@SVC_official) July 31, 2021 " class="align-text-top noRightClick twitterSection" data="
Welcome on board ❤️#HappyBirthdayKiaraAdvani#RC15 #SVC50@ShankarShanmugh @AlwaysRamCharan @MusicThaman @SVC_official pic.twitter.com/u4RU0Fs2ee
">Joining us on this super exciting journey is the talented and gorgeous @advani_kiara !
— Sri Venkateswara Creations (@SVC_official) July 31, 2021
Welcome on board ❤️#HappyBirthdayKiaraAdvani#RC15 #SVC50@ShankarShanmugh @AlwaysRamCharan @MusicThaman @SVC_official pic.twitter.com/u4RU0Fs2eeJoining us on this super exciting journey is the talented and gorgeous @advani_kiara !
— Sri Venkateswara Creations (@SVC_official) July 31, 2021
Welcome on board ❤️#HappyBirthdayKiaraAdvani#RC15 #SVC50@ShankarShanmugh @AlwaysRamCharan @MusicThaman @SVC_official pic.twitter.com/u4RU0Fs2ee
ಈ ಚಿತ್ರದ ಜೊತೆಗೆ, ಕರಣ್ ಜೋಹರ್ ನಿರ್ಮಾಣದ ಜುಗ್ ಜುಗ್ ಜೀಯೋ ಮತ್ತು ಅನೀಸ್ ಬಜ್ಮಿ ನಿರ್ದೇಶನದ ಭೂಲ್ ಭುಲಾಯ್ಯಾ ಚಿತ್ರಗಳು ಕೂಡಾ ಕಿಯಾರ ಅಡ್ವಾಣಿ ಕೈಯಲ್ಲಿವೆ.
ರಾಮ್ ಚರಣ್ ಮುಂದೆ ಎಸ್ ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರ ಮತ್ತು ತಂದೆ ಚಿರಂಜೀವಿಯೊಂದಿಗೆ ಆಚಾರ್ಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.