ಪದ್ಮಾವತ್ ನಂತಹ ಬ್ಲಾಕ್ಬಸ್ಟರ್ ಚಿತ್ರದ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಿತ್ತು. ಈಗ ಸಿನಿಮಾ ಫಸ್ಟ್ ಲುಕ್ ರಿಲೀಸ್ ರಿವೀಲಾಗಿದ್ದು, ನೋಡುಗರಿಂದ ಭಾರೀ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ಚಪಾಕ್ ಡಿಪ್ಪಿ ಸಿನಿ ಕರಿಯರ್ನಲ್ಲಿ ವಿಭಿನ್ನವಾದ ಚಿತ್ರ. ಏಕಂದ್ರೇ ದಂತದಗೊಂಬೆ ದೀಪಿಕಾ ಈ ಚಿತ್ರದಲ್ಲಿ ಡಿ-ಗ್ಲಾಮರ್ ರೋಲ್ ಮಾಡುತ್ತಿದ್ದಾರೆ. ಇದು ಆ್ಯಸಿಡ್ ದಾಳಿಗೆ ಸಿಲುಕಿ ಕತ್ತಲೆ ಬದುಕು ಸಾಗಿಸುತ್ತಿರುವ ಲಕ್ಷ್ಮಿ ಅಗರ್ವಾಲ್ ಎಂಬಾಕೆಯ ನಿಜಜೀವನದಿಂದ ಸ್ಫೂರ್ತಿ ಪಡೆದಿರುವ ಚಿತ್ರ. ಮೇಘನಾ ಗುಲ್ಜಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
- View this post on Instagram
🌺 @gauriandnainika 👗 @shaleenanathani 💄 @sandhyashekar 💇🏻♀️ @georgiougabriel
">
ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಚಪಾಕ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿರುವ ದೀಪಿಕಾ, ಇಂದಿನಿಂದ ಶೂಟಿಂಗ್ ಶುರು ಎಂದಿದ್ದಾರೆ. ಸದ್ಯ ರಿವೀಲ್ ಆಗಿರುವ ಫೋಟೋದಲ್ಲಿ ದೀಪಿಕಾ ಗುರುತು ಹಿಡಿಯುವುದ ಸ್ವಲ್ಪ ಕಷ್ಟ. ಆ್ಯಸಿಡ್ ದಾಳಿಗೆ ತುತ್ತಾಗಿ ಅಂದಗೆಟ್ಟಿರುವ ಮುಖ ಹೊತ್ತು ನೋವಿನ ಕಥೆ ಹೇಳಲು ಬರುತ್ತಿದ್ದಾರೆ ಡಿಪ್ಪಿ.
- " class="align-text-top noRightClick twitterSection" data="
">