ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರು ನಕಲಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಪಡೆದಿದ್ದರು ಎಂಬ ರಿಯಾ ಚಕ್ರವರ್ತಿ ಆರೋಪ ಬಹುಷಃ ಊಹಾಪೋಹವಾಗಿದೆ ಎಂದು ಸಿಬಿಐ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಇಂತಹ ಊಹಾಪೋಹಗಳು ಎಫ್ಐಆರ್ಗೆ ಆಧಾರವಾಗಲಾರವು ಎಂದು ಹೇಳಿದ್ದ ರಜಪೂತ್ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮೀತು ಸಿಂಗ್, ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಮೊದಲು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ನಿಷೇಧಿಸಲಾದ ಔಷಧಿಗಳನ್ನು ಸಂಗ್ರಹಿಸಲು ಸಹಾಯ ಮಾಡಲು ಫ್ಯಾಬ್ರಿಕೇಟೆಡ್ ಪ್ರಿಸ್ಕ್ರಿಪ್ಷನ್ ಬಳಸಲಾಗಿತ್ತು ಎಂದು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಆರೋಪಿಸಿದ್ದಾರೆ.
"ಪ್ರಸ್ತುತ ಎಫ್ಐಆರ್ನಲ್ಲಿರುವ ಆರೋಪಗಳು ಊಹಾಪೋಹವಾಗಿವೆ" ಎಂದು ಸಿಬಿಐ ಹೇಳಿದೆ.