ETV Bharat / sitara

ಮಹೇಶ್ ಭಟ್, ಆಲಿಯಾ ಭಟ್ ಮೇಲೆ ಕೇಸ್ ದಾಖಲು...ಜುಲೈ 8ಕ್ಕೆ ವಿಚಾರಣೆ - ಬಾಲಿವುಡ್ ನಟಿ ಆಲಿಯಾ ಭಟ್

'ಸಡಕ್ 2' ಚಿತ್ರದ ಪೋಸ್ಟರ್​​ನಲ್ಲಿ ಕೈಲಾಸ ಪರ್ವತದ ಚಿತ್ರವನ್ನು ಬಳಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂಬ ಆರೋಪದ ಮೇರೆಗೆ ಆಲಿಯಾ ಭಟ್ ಹಾಗೂ ಮಹೇಶ್ ಭಟ್​​​​​​ ಮೇಲೆ ದೂರು ದಾಖಲಾಗಿದೆ.

Case filed against Mahesh Bhatt
ದೂರು ದಾಖಲು
author img

By

Published : Jul 3, 2020, 3:24 PM IST

ಮುಜಾಫರ್​​​​​ಪುರ್​​/ಬಿಹಾರ: ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ಮುಖೇಶ್ ಭಟ್ ಹಾಗೂ ನಟಿ ಆಲಿಯಾ ಭಟ್ ವಿರುದ್ಧ ಇಂದು ವಕೀಲ ಸೋನು ಕುಮಾರ್ ಕೇಸ್ ದಾಖಲಿಸಿದ್ದಾರೆ.

ಜಿಲ್ಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲದಯಲ್ಲಿ ಈ ಮೂವರ ಮೇಲೆ ಸೋನುಕುಮಾರ್ ದೂರು ನೀಡಿದ್ದಾರೆ. 'ಸಡಕ್​ 2' ಚಿತ್ರದ ಪೋಸ್ಟರ್​​​ನಲ್ಲಿ ಕೈಲಾಸ ಪರ್ವತದ ಪೋಸ್ಟರ್ ಬಳಸುವ ಮೂಲಕ ಈ ಮೂವರು ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ವಕೀಲ ಸೋನು ಕುಮಾರ್​ ಆರೋಪಿಸಿದ್ದಾರೆ.

ಸೋನುಕುಮಾರ್ ಅವರು ಬಿಹಾರದ ಚಿತ್ರಕೂಟ್ ನಗರದ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎನ್ನಲಾಗಿದೆ. ಕೋರ್ಟ್ ಈ ಕೇಸ್ ವಿಚಾರಣೆಗೆ ಒಪ್ಪಿಕೊಂಡಿದೆ. ಜುಲೈ 8 ರಂದು ಈ ಕೇಸ್ ಸಂಬಂಧ ವಿಚಾರಣೆ ನಡೆಯಲಿದೆ ಎಂದು ಮತ್ತೊಬ್ಬ ವಕೀಲರಾದ ಪ್ರಿಯರಂಜನ್​​​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರ 'ಸಡಕ್ 2' ಚಿತ್ರದ ಪೋಸ್ಟರ್​ ಬಿಡುಗಡೆಯಾಗುತ್ತಿದ್ದಂತೆ ನೆಟ್ಟಿಗರು ಮಹೇಶ್ ಭಟ್ ಅವರನ್ನು ಬಹಳ ಟ್ರೋಲ್ ಮಾಡಿದ್ದರು. ಪೋಸ್ಟರ್​​ನಲ್ಲಿ ಪರ್ವತಗಳು ಬಿಟ್ಟರೆ, ನಟ ಅಥವಾ ನಟಿಯರ ಪೋಟೋಗಳು ಇರಲಿಲ್ಲ. ಆಲಿಯಾ ಭಟ್ ಕೂಡಾ ಈ ಪೋಸ್ಟರ್​​​​ನ ಉದ್ದೇಶವೇನು ಎಂಬುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದರು. ಆದರೆ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಇದಕ್ಕೆ ಈ ಮೂವರು ಏನು ವಿವರಣೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.