ETV Bharat / sitara

ಇಂದು ಮುಂಬೈ ಹೈಕೋರ್ಟ್​ನಿಂದ ಎಫ್​​​​ಐಆರ್ ರದ್ದು ಕೋರಿ ಕಂಗನಾ ಸಲ್ಲಿಸಿದ್ದ ಅರ್ಜಿ ವಿಚಾರಣೆ - Bollywood actress Kangana Ranaut

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿರುದ್ಧ ದಾಖಲಾದ ಎಫ್​​ಐಆರ್ ಅರ್ಜಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ಬಾಂಬೈ ಹೈಕೋರ್ಟ್​ನಲ್ಲಿ ನಡೆಯಲಿದೆ.

Kangana Ranaut
ಕಂಗನಾ ರಣಾವತ್
author img

By

Published : Nov 24, 2020, 2:02 PM IST

ತಮ್ಮ ವಿರುದ್ಧ ದಾಖಲಾದ ಎಫ್​ಐಆರ್​​​​​ ರದ್ದು ಕೋರಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂಬೈ ಹೈಕೋರ್ಟ್​ ನಡೆಸಲಿದೆ. ಕಂಗನಾ ತಮ್ಮ ಟ್ವೀಟ್ ಮೂಲಕ ಧಾರ್ಮಿಕ ಅಸಮಾನತೆ ಸೃಷ್ಟಿಸುತ್ತಾರೆ ಎಂಬ ಆರೋಪದಡಿ ಆಕೆ ವಿರುದ್ಧ ಎಫ್​​​ಐಆರ್ ದಾಖಲಾಗಿತ್ತು.

ಬಾಲಿವುಡ್​​​ನಲ್ಲಿ ಮುಸ್ಲಿಂ ಮತ್ತು ಹಿಂದೂ ನಟರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ನಟಿ ಕಂಗನಾ ರಣಾವತ್​​​ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದಕ್ಕೂ ಮುನ್ನ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ಸೆಲಬ್ರಿಟಿಯಾಗಿ ಜನರಿಗೆ ಮಾದರಿಯಾಗುವ ಬದಲು ಸಾಮಾಜಿಕ ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಕಂಗನಾ ವಿರುದ್ಧ ಎಫ್​​​​​ಐಆರ್ ದಾಖಲಾಗಿತ್ತು. ಆದರೆ ತಮ್ಮ ವಿರುದ್ಧ ದಾಖಲಾಗಿರುವ ಎಫ್​​ಐಆರ್​​​​​​​ ವಜಾಗೊಳಿಸಬೇಕೆಂದು ಕಂಗನಾ ಹಾಗೂ ಅವರ ತಂಗಿ ಬಾಂಬೈ ಹೈ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.