ETV Bharat / sitara

ಸೋನು ಸೂದ್ ವಿರುದ್ಧ ಬಿಎಂಸಿ ದೂರು: ನಟನ ಅರ್ಜಿ ವಜಾ ಮಾಡಿದ ಬಾಂಬೆ ಹೈಕೋರ್ಟ್ - ಬಾಂಬೆ ಹೈಕೋರ್ಟ್ ಲೇಟೆಸ್ಟ್ ನ್ಯೂಸ್

ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಸೋನು ಸೂದ್ ಹೋಟೆಲ್​​ ಆಗಿ ಪರಿವರ್ತಿಸಿದ್ದಾರೆ ಎಂಬ ಬಿಎಂಸಿ ದೂರಿನ್ನು ಕುರಿತು ಬಾಂಬೆ ಹೈಕೋರ್ಟ್ ಇಂದು ತನ್ನ ಆದೇಶ ಪ್ರಕಟಿಸಿದ್ದು, ಸೋನು ಸೂದ್​ ಅರ್ಜಿಯನ್ನ ವಜಾ ಮಾಡಿದೆ.

illegal construction case against Sonu Sood
ಸೋನು ಸೂದ್
author img

By

Published : Jan 21, 2021, 8:18 AM IST

Updated : Jan 21, 2021, 11:24 AM IST

ಮುಂಬೈ: ಅನುಮತಿಯಿಲ್ಲದೇ ಬಹುಮಹಡಿ ಕಟ್ಟಡವನ್ನು ಹೋಟೆಲ್​​ ಆಗಿ ಪರಿವರ್ತಿಸಿದ ಆರೋಪದಡಿ ನಟ ಸೋನು ಸೂದ್​ ವಿರುದ್ಧ ಬೃಹನ್​ ಮುಂಬೈ ಮಹಾನಗರ ಪಾಲಿಕೆ ದೂರನ್ನ ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಬಾಂಬೆ ಹೈಕೋರ್ಟ್​ ತಳ್ಳಿ ಹಾಕಿದೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಶಕ್ತಿ ನಗರ್​​ ಎಂಬ ಆರು ಅಂತಸ್ತಿನ ಕಟ್ಟಡವನ್ನು ಪಾಲಿಕೆಯ ಅನುಮತಿ ಪಡೆಯದೇ ಸೋನು ಸೂದ್ ಹೋಟೆಲ್​​ ಆಗಿ ಪರಿವರ್ತಿಸಿದ್ದಾರೆ. ಇದರ ವಿರುದ್ಧ ಮಹಾರಾಷ್ಟ್ರ ಪ್ರದೇಶ ಮತ್ತು ಪಟ್ಟಣ ಯೋಜನೆ (ಎಂಆರ್‌ಟಿಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಜುಹು ಪೊಲೀಸರಿಗೆ ಬಿಎಂಸಿ ಆಗ್ರಹಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ಇಲ್ಲಿ ಯಾವುದೇ ಅವ್ಯವಹಾರವಿಲ್ಲ. ನಾನು ಬಿಎಂಸಿ ಅನುಮತಿ ಪಡೆದಿದ್ದು, ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (MCZMA) ಅನುಮತಿಗಾಗಿ ಕಾಯುತ್ತಿದ್ದೆ ಎಂದು ಹೇಳಿದ್ದರು.

Last Updated : Jan 21, 2021, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.