ಬಾಲಿವುಡ್ ನಟಿ ತಮನ್ನಾ ಭಾಟಿಯಾ ಮದುವೆಗೆ ಸಜ್ಜಾಗಿದ್ದಾರಂತೆ. ಭಾವಿಪತಿ ಹುಡುಕಾಟದ ಜವಾಬ್ದಾರಿ ಅವರ ಫ್ಯಾಮಿಲಿಗೆ ವಹಿಸಿದ್ದಾರಂತೆ.
ಕಳೆದ ವರ್ಷದಿಂದ ಬಾಹುಬಲಿ ಬೆಡಗಿ ತಮನ್ನಾಳ ಮದುವೆ ಸುದ್ದಿ ಸಖತ್ ಸದ್ದು ಮಾಡಿತ್ತು. ಯುಎಸ್ ಮೂಲದ ವೈದ್ಯರೊಂದಿಗೆ ಮಿಲ್ಕಿ ಬ್ಯೂಟಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ರೂಮರ್ ಗಾಢವಾಗಿ ಹರಿದಾಡಿತ್ತು. ಅಂದು ಇದಕ್ಕೆ ಕೋಪದಿಂದಲೇ ಪ್ರತಿಕ್ರಿಯಿಸಿದ್ದ ಟ್ಯಾಮ್, ಈ ಲವ್-ಡೇಟಿಂಗ್ ರೂಮರ್ನಿಂದ ತಲೆ ಕೆಟ್ಟು ಹೋಗಿದೆ. ಮೊದಲು ಆ್ಯಕ್ಟರ್ ನಂತರ ಕ್ರಿಕೆಟರ್ ಈಗ ಡಾಕ್ಟರ್ ಜತೆ ನನ್ನ ಹೆಸರು ಕೇಳಿ ಬರುತ್ತಿದೆ. ಇದೆಲ್ಲ ಶುದ್ಧ ಸುಳ್ಳು ಎಂದು ಉತ್ತರಿಸಿದ್ದರು. ಇದೀಗ ಸ್ವತಃ ತಾವೇ ತಮ್ಮ ಮದುವೆ ಗುಟ್ಟು ರಟ್ಟು ಮಾಡಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತಾಡಿರುವ ಅವರು, ನನ್ನ ಮದುವೆಗೆ ಮನೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಹುಡುಗನನ್ನು ಹುಡುಕುವ ಎಲ್ಲ ಜವಾಬ್ದಾರಿಯನ್ನು ನಮ್ಮ ಮನೆಯವರಿಗೆ ನೀಡಿದ್ದೇನೆ ಎಂದಿದ್ದಾರೆ. ತಮನ್ನಾ ತಾಯಿ ರಜನಿ ಭಾಟಿಯಾ ಈಗಾಗಲೇ ಭಾವಿ ಅಳಿಯನ ಸರ್ಚಿಂಗ್ನಲ್ಲಿ ಬ್ಯುಸಿಯಾಗಿದ್ದಾರಂತೆ.