ETV Bharat / sitara

ಒಲೆಯಲ್ಲಿ ರೊಟ್ಟಿ ಬೇಯಿಸುತ್ತಿರುವ ಇವರು ಬಾಲಿವುಡ್​ ಸ್ಟಾರ್ ನಟಿಯ ತಾಯಿ..ಯಾರದು ಗೆಸ್ ಮಾಡಿ....! - Kangana Ranaut tweet

ತಮ್ಮ ತಾಯಿ ಒಲೆಯಲ್ಲಿ ರೊಟ್ಟಿ ಬೇಯಿಸುತ್ತಿರುವ ಫೋಟೋವೊಂದನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ತಾಯಿಯ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಕಂಗನಾ ತಮ್ಮ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

Kangana Ranaut mother
ಕಂಗನಾ ರಣಾವತ್ ತಾಯಿ
author img

By

Published : Jan 22, 2021, 10:14 AM IST

ಸಿನಿಮಾ ನಟ-ನಟಿಯರು ಎಂದ ಮೇಲೆ ಅಲ್ಲಿ ಶ್ರೀಮಂತಿಕೆ ಇದ್ದೇ ಇರುತ್ತದೆ. ಅವರು ಧರಿಸುವ ಉಡುಪು, ಆಹಾರ ಪದ್ಧತಿ ಎಲ್ಲದರಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಆದರೆ ಅಲ್ಲೋ ಇಲ್ಲೋ ಕೆಲವರು ಮಾತ್ರ ಬಹಳ ಸರಳವಾಗಿರುತ್ತಾರೆ. ಇದಕ್ಕೆ ಉದಾಹರಣೆ ಈ ಪೋಟೋ. ಹೀಗೆ ಒಲೆ ಮುಂದೆ ಕುಳಿತು ರೊಟ್ಟಿ ಬೇಯಿಸುತ್ತಿರುವ ಈ ಮಹಿಳೆ ಖ್ಯಾತ ಬಾಲಿವುಡ್​​ ನಟಿ ಕಂಗನಾ ರಣಾವತ್ ಅವರ ತಾಯಿ.

Kangana Ranaut
ಕಂಗನಾ ರಣಾವತ್

ಫೋಟೋ ನೋಡಿದೊಡನೆ ಉತ್ತರ ಭಾರತದ ಸಾಮಾನ್ಯ ಮಹಿಳೆಯೊಬ್ಬರು ಅಡುಗೆ ಮಾಡುತ್ತಿದ್ದಾರೇನೋ ಎನ್ನಿಸುವುದು ಗ್ಯಾರಂಟಿ.ಈ ಫೋಟೋವನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇಂದು ಬೆಳಗ್ಗೆ ಎಲ್ಲರಿಗೂ ತಿಂಡಿ ಮಾಡಲು ಹೊರಟ ಅಮ್ಮ, ಅಡುಗೆ ಮನೆಯಲ್ಲಿ ಬಹಳ ಚಳಿ ಇದೆ. ಆದ್ದರಿಂದ ಇಂದು ಮನೆ ಹೊರಗೆ ಕುಳಿತು ಬಿಸಿಲಿನಲ್ಲಿ ಅಡುಗೆ ಮಾಡುತ್ತೇನೆ ಎಂದರು. ನನಗೂ ಇದರ ಬಗ್ಗೆ ಕುತೂಹಲ ಉಂಟಾಯಿತು. ಅಮ್ಮ ಹೀಗೆ ಒಲೆ ಹಚ್ಚಿ ರೊಟ್ಟಿ ಸುಡುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ. ಹೀಗೆ ಮಾಡಿದ ಅಡುಗೆ ರುಚಿ ಮುಂದೆ ಬೇರೆ ಯಾವ ರುಚಿಯೂ ಇಲ್ಲ ಬಿಡಿ, ನನ್ನ ಅಮ್ಮನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ" ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • Spoke to mother she said kitchen is too cold so cooking outside in the sun, on angithi, I got curious, when I saw this couldn’t stop laughing, no jugad like desi jugad... proud of my mother to come up with this resourceful invention 😂😂😂 pic.twitter.com/Q90U11xMtO

    — Kangana Ranaut (@KanganaTeam) January 22, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಸುಶಾಂತ್​ ಸಿಂಗ್​​ ಸಾವಿಗೆ ಬಾಲಿವುಡ್​​ ಮಾಫಿಯಾ ಕಾರಣ : ಕಂಗನಾ

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕಂಗನಾ ಆಗ್ಗಾಗ್ಗೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು, ಫೋಟೋ, ವಿಡಿಯೋಗಳನ್ನು ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತಾವೆಲ್ಲಾ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಕಂಗನಾ ಇತ್ತೀಚೆಗೆ ಸಹೋದರ ಸಂಬಂಧಿ ಮದುವೆಯಲ್ಲಿ ಭಾಗವಹಿಸಿದ್ದ ವಿಡಿಯೋ ಕೂಡಾ ಹಂಚಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.