ಬಾಲಿವುಡ್ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಸಲ್ಲು ಹಾಗೂ ಕತ್ರಿನಾ 'ಭಾರತ್' ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿದ್ದಾರೆ.
ಚಿತ್ರದ ಟ್ರೇಲರ್ ನೋಡಿದರೆ ಇದು ಭಾರತಕ್ಕೆ ಸ್ವತಂತ್ಯ್ರ ಬಂದ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತದೆ. ಸಲ್ಮಾನ್ ಕಾನ್, ಕತ್ರೀನಾ ರೆಟ್ರೋ ಲುಕ್ ನೋಡುಗರನ್ನು ಅಂದಿನ ದಿನಗಳಿಗೆ ಕರೆದೊಯ್ಯುತ್ತದೆ. ಭೂಸೇನಾ ಅಧಿಕಾರಿಯಾಗಿ ಕೂಡಾ ಸಲ್ಮಾನ್ ಟ್ರೇಲರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ವಯೋವೃದ್ಧನ ಲುಕ್ನಲ್ಲೂ ಕಾಣಿಸಿದ್ದು ಈ ಟ್ರೇಲರ್, ವೀಕ್ಷಕರಿಗೆ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ದಿಶಾ ಪಠಾಣಿ ಕೂಡಾ ಸಿನಿಮಾದಲ್ಲಿದ್ದು ಸಲ್ಮಾನ್ ಖಾನ್ ತಂಗಿಯಾಗಿ ನಟಿಸಿದ್ದಾರೆ.
ಅತುಲ್ ಅಗ್ನಿಹೋತ್ರಿ, ಅಲ್ವಿರಾ ಖಾನ್ ಅಗ್ನಿಹೋತ್ರಿ, ಭೂಷಣ್ ಕುಮಾರ್, ಕೃಷ್ಣಕುಮಾರ್ ಜೊತೆ ಸೇರಿ ನಿರ್ಮಿಸಿರುವ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ತಬು, ಜಾಕ್ರಿಶ್ರಾಫ್, ಸುನಿಲ್ ಗ್ರೋವರ್, ಆಸಿಫ್ ಶೇಕಿ, ಸೋನಾಲಿ ಕುಲಕರ್ಣಿ ತಾರಾಗಣದಲ್ಲಿರುವ ಸಿನಿಮಾ ಜೂನ್ 5 ರಂದು ಬಿಡುಗಡೆಯಾಗುತ್ತಿದೆ.