ETV Bharat / sitara

ನಟಿಯರು-ಕ್ರಿಕೆಟಿಗರ ನಡುವಿನ ಪ್ರೇಮಕಥೆ..ಯಾರ ಸ್ಟೋರಿ ಸಕ್ಸಸ್​​​​...ಯಾರದ್ದು ಫೇಲ್ಯೂರ್​..? - ಸುಖಾಂತ್ಯ ಕಾಣದ ನಟಿಯರ ಕ್ರಿಕೆಟಿಗರ ಪ್ರೇಮಕಥೆ

60 ರ ದಶಕದಿಂದಲೂ ಬಾಲಿವುಡ್ ಹೀರೋಯಿನ್​​ಗಳು ಹಾಗೂ ಕ್ರಿಕೆಟಿಗರ ನಡುವೆ ಲವ್​ ಸ್ಟೋರಿಗಳು ಕೇಳಿಬರುತ್ತಿವೆ. ಈ ಪ್ರೇಮಕಥೆಗಳಲ್ಲಿ ಎಷ್ಟೋ ಪ್ರೇಮಕಥೆಗಳು ಸುಖಾಂತ್ಯ ಕಂಡಿದ್ದರೆ, ಬಹಳಷ್ಟು ಲವ್ ಸ್ಟೋರಿಗಳು ಸೋತಿವೆ.

Bollywood-cricket love stories
ನಟಿಯರು-ಕ್ರಿಕೆಟಿಗರ ನಡುವಿನ ಪ್ರೇಮಕಥೆ
author img

By

Published : Nov 18, 2020, 2:05 PM IST

ಮುಂಬೈ: ಬಾಲಿವುಡ್ ನಟಿಯರು ಹಾಗೂ ಕ್ರಿಕೆಟಿಗರ ನಡುವಿನ ಪ್ರೇಮಕಥೆ ಇಂದು ನಿನ್ನೆಯದಲ್ಲ. ಸುಮಾರು 60 ದಶಕದಿಂದಲೂ ಇಂತಹ ಅನೇಕ ಪ್ರೇಮಕಥೆಗಳು ಸಾಗುತ್ತಾ ಬಂದಿವೆ. ಶರ್ಮಿಳಾ ಠಾಗೂರ್-ಪಟೌಡಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಗೀತಾ ಬಸ್ರಾ-ಹರ್ಭಜನ್ ಸಿಂಗ್​​​ ಸೇರಿದಂತೆ ಅನೇಕ ಜೋಡಿಗಳು ಮದುವೆಯಾಗಿ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಆದರೆ ವಿಫಲವಾದ ಬಹಳಷ್ಟು ಪ್ರೇಮಕಥೆಗಳು ಕೂಡಾ ಇವೆ.

ಇಮ್ರಾನ್ ಖಾನ್- ಜೀನತ್ ಅಮಾನ್

Bollywood-cricket love stories
ಇಮ್ರಾನ್ ಖಾನ್- ಜೀನತ್ ಅಮಾನ್

ಪಾಕಿಸ್ತಾನದ ಕ್ರಿಕೆಟಿಗ ಇಮ್ರಾನ್ ಖಾನ್ ಹಾಗೂ ತಮ್ಮ ಬೋಲ್ಡ್ ಲುಕ್​​ನಿಂದಲೇ ಹುಡುಗರ ನಿದ್ರೆ ಕದ್ದಿದ್ದ ಜೀನತ್ ಅಮಾನ್ ರಿಲೇಷನ್​​​​ಶಿಪ್​​​ನಲ್ಲಿದ್ದಾರೆ, ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಆ ಸಮಯದಲ್ಲಿ ದೊಡ್ಡ ಸುದ್ದಿ ಆಗಿತ್ತು. ಏಕೆಂದರೆ ಈ ಸಮಯದಲ್ಲಿ ಇವರು ಕೆಲವು ದಿನಗಳ ಕಾಲ ಡೇಟಿಂಗ್ ಕೂಡಾ ಮಾಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಇವರ ನಡುವಿನ ರಿಲೇಷನ್ ಅಂತ್ಯವಾಯ್ತು. ಭಾರತ-ಪಾಕ್ತಿಸ್ತಾನ ಪ್ರೇಮಕಥೆಗೆ ಸುಖಾಂತ್ಯ ಕೂಡಿ ಬರಲಿಲ್ಲ.

ವಿವಿಯನ್ ರಿಚರ್ಡ್-ನೀನಾ ಗುಪ್ತಾ

Bollywood-cricket love stories
ವಿವಿಯನ್ ರಿಚರ್ಡ್-ನೀನಾ ಗುಪ್ತಾ

ವಿವಿಯನ್ ರಿಚರ್ಡ್ ಪಂದ್ಯವೊಂದಕ್ಕಾಗಿ ಮುಂಬೈಗೆ ಬಂದಿದ್ದಾಗ ನೀನಾ ಗುಪ್ತಾ ಹಾಗೂ ವಿವಿಯನ್ ನಡುವೆ ಪ್ರೀತಿ ಚಿಗುರಿದೆ. ಕಾರಣಾಂತರಗಳಿಂದ ಇವರಿಬ್ಬರ ಮದುವೆ ಸಾಧ್ಯವಾಗಲಿಲ್ಲ. ಆದರೆ ನೀನಾ ಅವರ ಪುತ್ರಿ ಮಸಾಬಾ, ವಿವಿಯನ್ ಅವರಿಗೆ ಜನಿಸಿದ ಮಗು ಎನ್ನಲಾಗುತ್ತಿದೆ.

ಕಪಿಲ್ ದೇವ್-ಸಾರಿಕಾ

Bollywood-cricket love stories
ಕಪಿಲ್ ದೇವ್-ಸಾರಿಕಾ

'ಹರಿಯಾಣ ಚಂಡಮಾರುತ' ಎಂದೇ ಹೆಸರಾದ ಕ್ರಿಕೆಟಿಗ ಕಪಿಲ್ ದೇವ್ ಹಾಗೂ ನಟಿ ಸಾರಿಕಾ ಕೂಡಾ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಇವರಿಬ್ಬರೂ ಪಾರ್ಟಿ, ಟ್ರಿಪ್ ಎಂದು ಹೆಚ್ಚಾಗಿ ಜೊತೆಯಾಗಿ ಸುತ್ತುತ್ತಿದ್ದರು. ಆದರೆ ಇವರ ಪ್ರೀತಿ ಕೂಡಾ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ನಂತರ ಸಾರಿಕಾ ಕಮಲ್ ಹಾಸನ್​​ ಅವರನ್ನು ಮದುವೆಯಾದರು.

ಮೊಹಮ್ಮದ್ ಅಜರುದ್ದೀನ್-ಸಂಗೀತ ಬಿಜ್ಲಾನಿ

Bollywood-cricket love stories
ಮೊಹಮ್ಮದ್ ಅಜರುದ್ದೀನ್-ಸಂಗೀತ ಬಿಜ್ಲಾನಿ

ಜಾಹೀರಾತೊಂದರ ಚಿತ್ರೀಕರಣದಲ್ಲಿ ಸಂಗೀತ ಬಿಜ್ಲಾನಿ ಅವರನ್ನು ಭೇಟಿ ಆದ ಮೊಹಮ್ಮದ್ ಅಜರುದ್ದೀನ್ ಸಂಗೀತ ಅವರನ್ನು ಪ್ರೀತಿಸಲು ಆರಂಭಿಸಿದರು. ಕೆಲವು ದಿನಗಳ ಕಾಲ ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದರು ಆದರೆ ಈ ಜೋಡಿಯ ಸಂಬಂಧ ಕೂಡಾ ಮದುವೆಯವರೆಗೆ ಬರಲಿಲ್ಲ.

Bollywood-cricket love stories
ರವಿಶಾಸ್ತ್ರಿ-ಅಮೃತ ಸಿಂಗ್

ಇವರಷ್ಟೇ ಮಾತ್ರವಲ್ಲ, ಮೊಹ್ಸಿನ್ ಖಾನ್-ರೀನಾ ರಾಯ್, ರವಿಶಾಸ್ತ್ರಿ-ಅಮೃತ ಸಿಂಗ್, ಸೌರವ್ ಗಂಗೂಲಿ-ನಗ್ಮಾ ಕೂಡಾ ತಾವು ಪ್ರೀತಿಸುತ್ತಿದ್ದೇವೆ. ಶೀಘ್ರದಲ್ಲೇ ನಾವು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿತ್ತು. ಆದರೆ ಈ ಜೋಡಿಗಳ ಸಂಬಂಧ ಕೂಡಾ ಅರ್ಧದಲ್ಲೇ ಮುರಿದುಬಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.