ETV Bharat / sitara

370 ನೇ ವಿಧಿಗೆ ಇತಿಶ್ರೀ...ಈ ಗಟ್ಸ್​ ಮೋದಿಗೆ ಮಾತ್ರ ಇದೆ ಎಂದ ನಟಿ ಕಂಗನಾ - ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಪಡಿಸಿರುವ ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ಮಂದಿ ಬೆಂಬಲ ಸೂಚಿಸಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Aug 5, 2019, 4:33 PM IST

ಕಣಿವೆ ರಾಜ್ಯ ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ನೇ ವಿಧಿಗೆ ಇತಿಶ್ರೀ ಹಾಡಿರುವ ಪ್ರಧಾನಿ ಮೋದಿಗೆ ಬಾಲಿವುಡ್ ಬೆಂಕಿ ಚೆಂಡು ಕಂಗನಾ ರಣಾವತ್ ಹ್ಯಾಟ್ಸಾಪ್​ ಹೇಳಿದ್ದಾರೆ.

ಗೃಹ ಮಂತ್ರಿ ಅಮಿತ್ ಶಾ, ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಇಂದು ರಾಜ್ಯಸಭೆಯಲ್ಲಿ ಅರ್ಟಿಕಲ್ 370 ರದ್ದುಗೊಳಿ ವಿಧೇಯಕ ಮಂಡಿಸಿದರು. ಈ ಮೂಲಕ ಜಮ್ಮು- ಕಾಶ್ಮೀರಕ್ಕೆ ವಿಶೇಷ ಆದ್ಯತೆ ಕಲ್ಪಿಸಿದ್ದ 370 ನೇ ವಿಧಿ ಇತಿಹಾಸದ ಪುಟ ಸೇರುವಂತೆ ಮಾಡಿದ್ದಾರೆ. ಮೋದಿ ಸರ್ಕಾರದ ಈ ದಿಟ್ಟ ನಡೆಯನ್ನು ಬಾಲಿವುಡ್​ನ ಮಣಿ ಕರ್ಣಿಕಾ ಕಂಗನಾ ಮುಕ್ತವಾಗಿ ಸ್ವಾಗತಿಸಿದ್ದಾರೆ. ಇಂತಹ ಧೈರ್ಯ ಕೇವಲ ಮೋದಿ ಅವರಿಗೆ ಮಾತ್ರ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣಕ್ಕೆ ಇದೊಂದು ಐತಿಹಾಸಿಕ ಹೆಜ್ಜೆ. ಕಳೆದ ಕೆಲ ವರ್ಷಗಳಿಂದ ಈ ವಿಧಿ ಕಿತ್ತೊಗೆಯುವಂತೆ ನಾನು ಒತ್ತಾಯಿಸುತ್ತ ಬಂದಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂತು. ಇಂತಹ ಒಂದು ದಿಟ್ಟ - ದೃಢ ನಿರ್ಧಾರ ಕೈಗೊಳ್ಳುವುದು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ನಂಗೆ ಗೊತ್ತಿತ್ತು. ಈ ಐತಿಹಾಸಿಕ ದಿನ ಸೃಷ್ಟಿಸಿದ ಮೋದಿ ಅವರಿಗೆ ಇಡೀ ದೇಶದ ಪರ ಧನ್ಯವಾದಗಳು. ಮುಂದಿನ ಉಜ್ವಲ ಭಾರತವನ್ನು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.