ಹೌದು, ಬಾಲಿವುಡ್ ನಟಿ ಸೋನಾಲಿ ಸೈಗಲ್ ನಿರ್ದೇಶಕನೋರ್ವ ಈಕೆಗಿಟ್ಟ 'ಅಸ್ವಾಭಾವಿಕ' ಡಿಮ್ಯಾಂಡ್ ರಿವೀಲ್ ಮಾಡಿದ್ದಾರೆ. ಸೋನಾಲಿ, ಚಿತ್ರವೊಂದರ ಆಡಿಷನ್ಗೆ ಎಲ್ಲ ತಯಾರಿ ಮಾಡಿಕೊಂಡು ಹೋಗಿದ್ದರಂತೆ. ಒಂದು ವೇಳೆ ಆ ಚಿತ್ರದಲ್ಲಿ ಅವಕಾಶ ಸಿಕ್ರೆ ನನ್ನಂತ ಅದೃಷ್ಟವಂತೆ ಯಾರೂ ಇಲ್ಲ ಎಂದು ಉತ್ಸುಕರಾಗಿದ್ದರಂತೆ. ಆದರೆ, ನಿರ್ದೇಶಕನ ಜತೆ ನಡೆದ ಮೀಟಿಂಗ್ ಇವರ ಆಸೆಗೆ ತಣ್ಣೀರು ಎರಚಿತಂತೆ.
'ಅಸಹಜವಾಗಿ ನನ್ನ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಆ ನಿರ್ದೇಶಕ ಹೇಳಿದ. ಇದರಿಂದ ನಂಗೆ ಆಘಾತವಾಯಿತು. ಒಂದು ಕ್ಷಣ ಹೃದಯ ಒಡೆದಂತಾಯಿತು. ಪ್ರಕೃತಿಯ ವಿರುದ್ಧವಾಗಿ ನನ್ನ ದೇಹಕ್ಕೆ ಕತ್ತರಿ ಹಾಕಿಸಿಕೊಳ್ಳಲು ನಾನು ಬಯಸಲಿಲ್ಲ. ನೇರವಾಗಿಯೇ ನಿರ್ದೇಶಕನಿಗೆ ನೋ ಎಂದು ಹೇಳಿ ಬಂದೆ. ಇದರಿಂದ ದೊಡ್ಡ ಅವಕಾಶವನ್ನು ನಾನು ಕಳೆದುಕೊಂಡೆ' ಎಂದು ಸೋನಾಲಿ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.
ಪಾತ್ರಕ್ಕೆ ಅಗತ್ಯವಿರುವಷ್ಟು ನ್ಯಾಚುರಲ್ ( ಸೂಕ್ತ ವಿಧಾನ) ಆಗಿ ದೇಹ ರಚನೆ ಮಾಡಿಕೊಳ್ಳಬಹುದು. ಜಿಮ್ಗಳಲ್ಲಿ ವರ್ಕೌಟ್ ಮಾಡಿ, ಬಾಡಿ ಹದಗೊಳಿಸಬಹುದು. ಆದರೆ, ಅನ್ನ್ಯಾಚುರಲ್ ಆಗಿ ಏನಾದ್ರೂ ಮಾಡಿಕೊಂಡ್ರೆ ಅದರಿಂದ ಅಡ್ಡಪರಿಣಾಮಗಳೇ ಜಾಸ್ತಿ. ಇದೇ ಕಾರಣಕ್ಕೆ ನಾನು ಆ ನಿರ್ದೇಶಕನ ಆಫರ್ ನಿರಾಕರಿಸಿದೆ ಎನ್ನುತ್ತಾರೆ ಸೋನಾಲಿ.
ಇನ್ನು ಸೋನಾಲಿ ಸೈಗಲ್ 'ಪ್ಯಾರ್ ಕಾ ಪಂಚನಾಮ' ಸರಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ತಮ್ಮ ಶೆಟ್ಟರ ಚಿತ್ರದ ರಿಲೀಸ್ಗೆ ಕಾಯುತ್ತಿದ್ದಾರೆ.