ETV Bharat / sitara

ಭುಗಿಲೆದ್ದ ಆಕ್ರೋಶ:  ವಾಲ್ಮೀಕಿ ಸಮುದಾಯದ ಕ್ಷಮೆಯಾಚಿಸಿದ ನಟಿ ಸೋನಾಕ್ಷಿ - ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕ್ಷಮೆ

ವಾಲ್ಮೀಕಿ ಸಮುದಾಯದವರ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕ್ಷಮೆ ಕೋರಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Aug 6, 2019, 5:26 PM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚಿನ ರೆಡಿಯೊ ಜಾಕಿ ಸಿದ್ಧಾರ್ಥ್ ಖಾನ್ ನಡೆಸಿದ ಸಂದರ್ಶನದ ವೇಳೆ ಭಂಗಿ ( ವಾಲ್ಮೀಕಿ ಸಮುದಾಯಕ್ಕಿರುವ ಇನ್ನೊಂದು ಹೆಸರು) ಪದ ಬಳಸಿದ್ದರು. ಇದು ನಮ್ಮ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ವಾಲ್ಮೀಕಿ ಸಮುದಾಯದವರು ನಟಿಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಭಾನುವಾರ ಸೋನಾಕ್ಷಿ ಸಿನ್ಹಾ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಉತ್ತರ ಪ್ರದೇಶದ ಮೊರಾದಾಬಾದ್ ಸಮೀಪ ಸೋನಾಕ್ಷಿ ಅವರ ಪ್ರತಿಮೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ವಿರುದ್ಧ ಎದ್ದಿರುವ ವಿರೋಧ ಗಮನಿಸಿರುವ ಸೋನಾಕ್ಷಿ ಟ್ವೀಟರ್ ಮೂಲಕ ನಟಿ ಕ್ಷಮೆಯಾಚಿಸಿದ್ದಾರೆ. ನಾನು ಉದ್ದೇಶ ಪೂರ್ವಕವಾಗಿ ಆ ಪದ ಬಳಸಿಲ್ಲ. ಇದರಿಂದ ಯಾವುದೇ ಸಮುದಾಯ ಅಥವಾ ಭಾವನೆಗಳನ್ನು ನೋಯಿಸಿದ್ದರೆ ಕ್ಷಮೆಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಹಿಂದೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ಇದೇ ಯಡವಟ್ಟು ಮಾಡಿಕೊಂಡಿದ್ದರು. ರಿಯಾಲಿಟಿ ಶೋವೊಂದರಲ್ಲಿ ತಮ್ಮ ಡಾನ್ಸ್ ಭಂಗಿ ಸ್ಟೈಲ್​ನಲ್ಲಿದೆ ಎಂದಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರತಿಯಾಗಿದ್ದ ಶಿಲ್ಫಾ ಶೆಟ್ಟಿ, ಸಲ್ಮಾನ್​ಗೆ ಧ್ವನಿ ಕೂಡಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಸಲ್ಲು ಜತೆ ದಬಾಂಗ್ 3ರರಲ್ಲಿ ನಟಿಸುತ್ತಿರುವ ಸೋನಾಕ್ಷಿ ಕೂಡ ಅದೇ ಪ್ರಮಾದ ಎಸಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.