2019ರ ಕಾನ್ಸ್ ಫಿಲ್ಮ್ ಫೆಸ್ಟಿವಲ್ಗೆ ಫ್ರಾನ್ಸ್ ಸಜ್ಜುಗೊಂಡಿದೆ. ಇಂದಿನಿಂದ ಚಾಲನೆ ಪಡೆದಿರುವ ಈ ಫಿಲ್ಮೋತ್ಸವ ಹಲವು ದೇಶಗಳ ಸೆಲಬ್ರಿಟಿಗಳನ್ನು ಬರಮಾಡಿಕೊಳ್ಳುತ್ತಿದೆ.
- " class="align-text-top noRightClick twitterSection" data="
">
ಈಗಾಗಲೇ ಬಾಲಿವುಡ್ ನಟಿಮಣಿಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಹಾಗೂ ಹೀನಾ ಖಾನ್ ಸೇರಿದಂತೆ ಸಾಕಷ್ಟು ನಟಿಯರು ಕಾನ್ಸ್ ಅಂಗಳಕ್ಕೆ ಹಾರಿದ್ದಾರೆ. ಬಿಗ್ಬಾಸ್ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ಹೀನಾ ಖಾನ್ಗೆ ಇದು ಚೊಚ್ಚಲ ಫಿಲ್ಮ್ ಫೆಸ್ಟಿವಲ್. ಫಸ್ಟ್ ಟೈಮ್ ಹೀನಾ ಖಾನ್ ಕಾನ್ಸ್ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿದ್ದಾರೆ. ತಮ್ಮಈ ಸಂತಸದ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
- " class="align-text-top noRightClick twitterSection" data="
">
ಇನ್ನು ಬಿಟೌನ್ ಪಿಗ್ಗಿ ಪ್ರಿಯಾಂಕಾ ಕಲರ್ಫುಲ್ ಡ್ರೆಸ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ್ರು. ಮೊನ್ನೆಯಷ್ಟೆ ಮೆಟ್ಗಾಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಭಿನ್ನ ಗೆಟಪ್ನಲ್ಲಿ ಗಮನ ಸೆಳೆದಿದ್ದ ಈ ನಟಿ, ಕ್ಯಾನೆಸ್ನಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಕಂಗೊಳಿಸಿದರು.
- " class="align-text-top noRightClick twitterSection" data="
">