ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜತೆ ಜಾಲಿ ಮೂಡ್ನಲ್ಲಿದ್ದಾರೆ. ಗಂಡನ ಜತೆ ವೆಸ್ಟ್ ಇಂಡೀಸ್ಗೆ ಹಾರಿರುವ ಈ ಬ್ಯೂಟಿ ಜಾಲಿಯಾಗಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.
ನಿನ್ನೆ ಕೆರೆಬಿಯನ್ ನಾಡಿನ ಸುಂದರ ಬೀಚ್ಗೆ ತೆರಳಿರುವ ಅನುಷ್ಕಾ, ಅಲ್ಲಿಯ ಕಡಲ ತೀರದಲ್ಲಿ ಮಸ್ತ್ ಮೋಜು ಮಾಡಿದ್ದಾರೆ. ಆರೆಂಜ್,ಬಿಳಿ ಹಾಗೂ ಪಿಂಕ್ ಬಣ್ಣದ ಬಿಕಿನಿ ಮೇಲೆ ಕಾಣಿಸಿಕೊಂಡು ಸಂಭ್ರಮಿಸಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಚಂದನೆಯ ನಗೆ ಬೀರಿದ್ದಾರೆ. ತಮ್ಮ ಈ ಹಾಟ್ ಪೋಟೊ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು 'ಸನ್ ಕಿಸ್' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
After long time ಬಿಕಿನಿ ಮೇಲೆ ಪ್ರತ್ಯಕ್ಷಗೊಂಡ ಅನುಷ್ಕಾಗೆ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಜಸ್ಟ್ 10 ಗಂಟೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಈ ಲುಕ್ ಮೆಚ್ಚಿಕೊಂಡಿದ್ದಾರೆ. ಪತಿ ವಿರಾಟ್ ಕೂಡ ಪತ್ನಿಯ ನ್ಯೂ ಲುಕ್ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾರ್ಟ್ ಕಣ್ಣುಗಳ ಇಮೋಜಿಯನ್ನು ಪೋಸ್ಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.