ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಮೂಲ್ಯ ಲಿಯೋನ ಪಾಕ್ ಪರ ಘೋಷಣೆ ಕೂಗಿದ ಘಟನೆ ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ನಿನ್ನೆ ಆರ್ದ್ರಾ ಎಂಬ ಮತ್ತೊಂದು ಯುವತಿ ಕೂಡಾ ಪಾಕ್ ಪರ ಘೋಷಣೆ ಕೂಗಿ ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದೆ.
- " class="align-text-top noRightClick twitterSection" data="
">
ಬಾಲಿವುಡ್ ಹಿರಿಯ ನಟ, ಮಾಜಿ ಲೋಕಸಭೆ ಸದಸ್ಯ ಶತ್ರುಘ್ನ ಸಿನ್ಹಾ ಇತ್ತೀಚೆಗೆ ಪಾಕಿಸ್ತಾನದ ಲಾಹೋರ್ನಲ್ಲಿ ನಡೆದ ಮದುವೆಯಲ್ಲಿ ಭಾಗಿಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಲಾಹೋರ್ ಫೋಟೋಗ್ರಾಫರ್ ಒಬ್ಬರು ಮದುವೆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಇದೀಗ ಈ ಫೋಟೋಗಳು ಹಾಗೂ ವಿಡಿಯೋ ಎಲ್ಲಾ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ. ಮದುವೆಗೂ ಮುನ್ನ ನಡೆದ ಕವ್ವಾಲಿ ನೈಟ್ ಕಾರ್ಯಕ್ರಮದಲ್ಲಿ ಶತ್ರುಘ್ನ ಸಿನ್ಹಾ ಕಾಣಿಸಿಕೊಂಡಿದ್ದು ಅವರೊಂದಿಗೆ ಪಾಕಿಸ್ತಾನಿ ನಟಿ ರೀಮಾ ಖಾನ್ ಇದ್ದಾರೆ. ರೀಮಾ ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶತ್ರು ಘ್ನ ಸಿನ್ಹಾ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
- View this post on Instagram
Attended wedding in Lahore . . #shatrughansinha #lahore #weddingbells #qawalinight
">
ಈ ಪೋಟೋಗಳಿಗೆ ಕಮೆಂಟ್ ಮಾಡಿರುವ ನೆಟಿಜನ್ಸ್ 'ನಮ್ಮ ದೇಶದ ಗಡಿಯಲ್ಲಿ ಸೈನಿಕರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಆದರೆ ನಮ್ಮ ಬಾಲಿವುಡ್ ಸ್ಟಾರ್ಗಳು ಮತ್ತೆ ಮತ್ತೆ ಪಾಕಿಸ್ತಾನದೊಂದಿಗೆ ತಮ್ಮ ಸ್ನೇಹವನ್ನು ಸಾಬೀತುಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪಾಕಿಸ್ತಾನದಲ್ಲಿ ಏನು ಮಾಡುತ್ತಿದ್ದೀರಿ ಎಂದು ಶತ್ರುಘ್ನ ಸಿನ್ಹಾ ಅವರನ್ನು ಕೇಳಬೇಕು ಎಂದುಕೊಂಡೆ. ಆದರೆ ಅವರ ಉತ್ತರ ಕಾಮೊಶ್ ಎಂದಷ್ಟೇ ಆಗಿರುತ್ತದೆ' ಎಂದು ಮತ್ತೊಬ್ಬರು ನೆಟಿಜನ್ಸ್ ಕಮೆಂಟ್ ಮಾಡಿದ್ದಾರೆ.