ETV Bharat / sitara

ತನ್ನ ಬಾಡಿಗಾರ್ಡ್​​ ಕಪಾಳಕ್ಕೆ ಹೊಡೆದ ನಟ ಸಲ್ಮಾನ್​​​! ಕಾರಣ? - ಸೆಕ್ಯೂರಿಟಿಗಾರ್ಡ್

ಅಭಿಮಾನಿಯನ್ನು ನೂಕಿದ ಕಾರಣಕ್ಕಾಗಿ ತಮ್ಮ ಅಂಗರಕ್ಷಕನಿಗೆ ಸಲ್ಮಾನ್​ ಹೊಡೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಲ್ಮಾನ್
author img

By

Published : Jun 6, 2019, 10:29 AM IST

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸೆಕ್ಯೂರಿಟಿ ಗಾರ್ಡ್​​ಗೆ ಕಪಾಳ ಮೋಕ್ಷ ಮಾಡಿದ್ದಾರೆ. ನಿನ್ನೆ 'ಭಾರತ್' ಚಿತ್ರ ನೋಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಸಲ್ಮಾನ್ ಖಾನ್ ನಟಿಸಿರುವ 'ಭಾರತ್' ಚಿತ್ರ ನಿನ್ನೆ ತೆರೆ ಕಂಡಿದೆ. ಅಭಿಮಾನಿಗಳೊಂದಿಗೆ ಚಿತ್ರ ನೋಡಲು ಸಲ್ಲು ಭಾಯ್​ ಆಗಮಿಸಿದ್ದರು. ಈ ವೇಳೆ ಥಿಯೇಟರ್​ ಒಳಗೆ ಹೋಗುತ್ತಿದ್ದ ವೇಳೆ ಅಭಿಮಾನಿಯೋರ್ವನನ್ನು ಸಲ್ಮಾನ್ ಅವರ ಬಾಡಿಗಾರ್ಡ್​ ನೂಕಿದ್ದಾನೆ. ಇದರಿಂದ ಕೋಪಗೊಂಡ ಸಲ್ಮಾನ್ ತನ್ನ ಅಂಗರಕ್ಷಕನ ಕಪಾಳಕ್ಕೆ ಹೊಡೆದಿದ್ದಾರೆ.

ಇನ್ನು ಭಾಯ್​ಜಾನ್ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳನ್ನು ಇಷ್ಟು ಆದರ-ಪ್ರೀತಿಯಿಂದ ಕಾಣುವುದರಿಂದಲೇ ಸಲ್ಮಾನ್​ಗೆ ಕೋಟ್ಯಂತರ ಜನ ಫ್ಯಾನ್ಸ್​ ಇದ್ದಾರೆ ಎಂದು ಕೆಲವರು ಹೊಗಳಿದ್ದಾರೆ. ಆದರೆ, ಇನ್ನು​ ಕೆಲವರು ಸಲ್ಲು ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್​, ಸಲ್ಮಾನ್ ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಅಭಿಮಾನಿಯನ್ನು ದೂರಕ್ಕೆ ತಳ್ಳಿ, ತನ್ನ ಕರ್ತವ್ಯ ಪ್ರಮಾಣಿಕವಾಗಿ ನಿಭಾಯಿಸಿದ್ದಾನೆ. ಅವನನ್ನು ಹೊಡೆಯುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಸಲ್ಮಾನ್ ಹೊಡೆದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.