ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟಿ ಕಾಜೋಲ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವೇಳೆ ಮಗಳನ್ನ ಮಿಸ್ ಮಾಡಿಕೊಳ್ಳುವುದಾಗಿ ನಟಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಕಾಜೋಲ್ ಮಗಳ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. "ನನ್ನ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ನನ್ನ 'ರುಡಾಲ್ಫ್ ಮೂಗ'ನ್ನು (ಕೆಂಪು ಮೂಗು) ಯಾರಿಗೂ ತೋರಿಸಲು ಬಯಸುವುದಿಲ್ಲ. ಆದ್ದರಿಂದ ನಾವು ವಿಶ್ವದ ಅತ್ಯಂತ ಮಧುರವಾದ ನಗುವಿಗೆ ಅಂಟಿಕೊಳ್ಳೋಣ. ಮಿಸ್ ಯೂ ನೈಸಾ ದೇವಗನ್" ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಲೆಹೆಂಗಾದಲ್ಲಿ ಪೋಸ್ ನೀಡಲು ರಶ್ಮಿಕಾ ಮಂದಣ್ಣ ಹರಸಾಹಸ..
ಅಭಿಮಾನಿಗಳು ಶೀಘ್ರವೇ ಗುಣಮುಖರಾಗಿ ಎಂದು ಕಾಜೋಲ್‌ಗೆ ಹಾರೈಸುತ್ತಿದ್ದು, ಚೇತರಿಕೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಜೋಲ್ ಮತ್ತು ನಟ ಅಜಯ್ ದೇವಗನ್ ದಂಪತಿಗೆ 18 ವರ್ಷದ ಪುತ್ರಿ ನೈಸಾ ದೇವಗನ್ ಎಂಬ ಹಾಗೂ 11 ವರ್ಷದ ಪುತ್ರ ಯುಗ್ ದೇವಗನ್ ಇದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ