ಮುಂಬೈ: ಇಂದು ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಹುಟ್ಟುಹಬ್ಬ. ಬುಧವಾರ ತಮ್ಮ ತಾಯಿಯನ್ನು ಕಳೆದುಕೊಂಡಿದ್ದ ಅಕ್ಷಯ್ ಕುಮಾರ್ಗೆ ತಮ್ಮ 55ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕಿಂತ ವಿಷಾದವೇ ಹೆಚ್ಚಾಗಿದೆ.
ಇಂದು ತಮ್ಮ ಹುಟ್ಟುಹಬ್ಬದ ನಿಮಿತ್ತ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ಇದು ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ, ನನ್ನಮ್ಮ ನನಗಾಗಿ ಹ್ಯಾಪಿ ಬರ್ತ್ಡೇ ಹಾಡನ್ನು ಖಚಿತವಾಗಿ ಹಾಡುತ್ತಿರುತ್ತಾರೆ ಎಂದು ಅನ್ನಿಸುತ್ತದೆ ಎಂದಿದ್ದಾರೆ.
-
Would have never liked it this way but am sure mom is singing Happy Birthday to me from right up there! Thanks to each one of you for your condolences and wishes alike. Life goes on. pic.twitter.com/PdCGtRxrvq
— Akshay Kumar (@akshaykumar) September 9, 2021 " class="align-text-top noRightClick twitterSection" data="
">Would have never liked it this way but am sure mom is singing Happy Birthday to me from right up there! Thanks to each one of you for your condolences and wishes alike. Life goes on. pic.twitter.com/PdCGtRxrvq
— Akshay Kumar (@akshaykumar) September 9, 2021Would have never liked it this way but am sure mom is singing Happy Birthday to me from right up there! Thanks to each one of you for your condolences and wishes alike. Life goes on. pic.twitter.com/PdCGtRxrvq
— Akshay Kumar (@akshaykumar) September 9, 2021
ಸಂತಾಪ ಮತ್ತು ಹಾರೈಕೆಗಳನ್ನು ಸಲ್ಲಿಸಿದ ಪ್ರತಿಯೊಬ್ಬರೂ ಕೂಡಾ ಧನ್ಯವಾದಗಳು ಎಂದಿರುವ ಅವರು ಜೀವನ ಹಾಗೆಯೇ ನಡೆಯುತ್ತಿದೆ ಎಂದು ಟ್ವೀಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ಮುಂಬೈನ ಹಿರಾನಂದನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.