ETV Bharat / sitara

ಬಿಗ್​ಬಾಸ್-15ರ ಸ್ಪರ್ಧಿಗಳು ಇವ್ರೇನಾ?.. ಒಮ್ಮೆ ನೋಡಿ ಬಿಡಿ! - ಬಿಗ್ ಬಾಸ್ ಸೀಸನ್‌ 15

ಬಿಗ್​ಬಾಸ್​ ಹೊಸ ಸೀಸನ್ ಅಕ್ಟೋಬರ್ 2 ರಿಂದ ಪ್ರಸಾರವಾಗಲಿದ್ದು, ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕರಣ್​​, ಶಮಿತಾ, ನಿಶಾಂತ್​​, ತೇಜಸ್ವಿನಿ, ಉಮರ್​, ಪ್ರತೀಕ್​, ಸಿಂಬಾ, ಅಫ್ಸಾನ, ಡೋನಾಲ್​, ಆಕಾಸ ಅವರು ದೊಡ್ಡಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

Bigg Boss 15: Meet confirmed contestants who will set the house on FIRE
ಹಿಂದಿ ಬಿಗ್​ಬಾಸ್-15ರ ಸ್ಪರ್ಧಿಗಳು ಇವ್ರೇನಾ?
author img

By

Published : Sep 29, 2021, 9:33 AM IST

ಹಿಂದಿ ಬಿಗ್​ಬಾಸ್​ ಹೊಸ ಸೀಸನ್ ಅಕ್ಟೋಬರ್ 2 ರಂದು ರಾತ್ರಿ 9.30ಕ್ಕೆ ಮತ್ತು ನಂತರ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಮತ್ತು ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಹಿಂದಿ ಬಿಗ್​ಬಾಸ್-15ರ​​ ಸ್ಫರ್ಧಿಗಳು ಯಾರೆಂಬುದು ರಿವೀಲ್​ ಆಗಿದ್ದರೂ ಇನ್ನೂ ದೃಢವಾಗಿಲ್ಲ. ಆದರೆ, ನಿಮ್ಮ ನೆಚ್ಚಿನ ಸ್ಪರ್ಧಿಗಳ ಕೆಲ ವಿಡಿಯೋ ಇಲ್ಲಿದೆ ನೋಡಿ.

ಹಿಂದಿ ಬಿಗ್​ಬಾಸ್-15ರ ಸ್ಪರ್ಧಿಗಳು ಇವ್ರೇನಾ?

ಈ ಬಾರಿ ಬಿಗ್ ಬಾಸ್ 15 ಜಂಗಲ್ ಥೀಮ್ ಹೊಂದಿದ್ದು, ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕರಣ್​​, ಶಮಿತಾ, ನಿಶಾಂತ್​​, ತೇಜಸ್ವಿನಿ, ಉಮರ್​, ಪ್ರತೀಕ್​, ಸಿಂಬಾ, ಅಫ್ಸಾನ, ಡೋನಾಲ್​, ಆಕಾಶ ಅವರು ದೊಡ್ಡಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್ ನಡೆಸಿಕೊಟ್ಟ ಬಿಗ್ ಬಾಸ್-1 ಒಟಿಟಿ(Bigg Boss OTT) 42 ದಿನಗಳ ಕಾಲ ನಡೆಯಿತು. ಈ ಶೋನಲ್ಲಿ 14 ಸ್ಪರ್ಧಿಗಳು ಭಾಗವಹಿಸಿದ್ದು, ದಿವ್ಯಾ ಅಗರ್ವಾಲ್​ ಸ್ಪರ್ಧೆಯ ವಿಜೇತರಾಗಿ ಟ್ರೋಫಿ ಹಾಗೂ 25 ಲಕ್ಷ ರೂ. ಬಹುಮಾನ ಮುಡಿಗೇರಿಸಿಕೊಂಡ್ರು. ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್ ಆಗಿ ಬಿಗ್​ಬಾಸ್-15 ಟಿವಿ ಶೋ ಗೆ ಡೈರೆಕ್ಟ್​ ಎಂಟ್ರಿ ಪಡೆದ್ರು. ಅದೃಷ್ಟದ ಸೂಟ್‌ಕೇಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರತೀಕ್‌ ಕೂಡ ಬಿಗ್​ಬಾಸ್-15 ಟಿವಿ ಶೋ ಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಮಲ್ಲೋರ್ಕಾಗೆ ಹಾರಿದ ಶಾರುಖ್​​​ - ದೀಪಿಕಾ... ಯಾಕಾಗಿ ಗೊತ್ತಾ?

ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಪ್ರತೀಕ್‌ ಮುಂದೆ ಎರಡು ಆಯ್ಕೆಗಳನ್ನು ಇಡಲಾಗಿತ್ತು. ಅದರಲ್ಲಿ ಒಂದು ಅದೃಷ್ಟದ ಸೂಟ್‌ಕೇಸ್, ಇನ್ನೊಂದು ಫಿನಾಲೆಯ ಮುಂದಿನ ಹಂತ ತಲುಪುವುದು. ಈ ಸಂದರ್ಭದಲ್ಲಿ ಸೂಟ್‌ಕೇಸ್ ಆಯ್ಕೆ ಮಾಡಿಕೊಂಡ ಪ್ರತೀಕ್​ಗೆ ಭರ್ಜರಿ ಆಫರ್​ ಲಭಿಸಿದೆ. ಅದೇನೆಂದರೆ, ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್‌ 15ರ ಟಿವಿ ಶೋಗೆ ಡೈರೆಕ್ಟ್​ ಎಂಟ್ರಿ ಟಿಕೆಟ್. ಈ ಮೂಲಕ ಬಿಗ್ ಬಾಸ್ ಸೀಸನ್ 15ರ ಮೊದಲ ಸ್ಪರ್ಧಿಯಾಗಿ ಪ್ರತೀಕ್ ಇರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.