ETV Bharat / sitara

33 ಡಿಗ್ರಿ ಮೈನಸ್​ ಚಳಿಯಲ್ಲಿ ಬಿಗ್​ ಬಿ... ಟ್ವೀಟ್ ಮಾಡಿ ಅನುಭವ ಹಂಚಿಕೊಂಡ ಅಮಿತಾಬ್​! - ಲಡಾಕ್​ನಲ್ಲಿ ಅಮಿತಾಬ್​ ಬಚ್ಚನ್​

ಲಡಾಖ್​ನ ಮೈ ಕೊರೆಯುವ ಚಳಿಯಲ್ಲಿ ನಿಂತು ಫೋಟೋ ತೆಗೆಯಿಸಿಕೊಂಡಿರುವ ಬಿಗ್ ಬಿ ಇದೀಗ ಅದನ್ನು ಶೇರ್ ಮಾಡಿದ್ದಾರೆ.

Big B
Big B
author img

By

Published : Jan 6, 2021, 5:26 PM IST

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಲಡಾಖ್​ಗೆ ಭೇಟಿ ನೀಡಿದ್ದ ಬಾಲಿವುಡ್​ನ ಹಿರಿಯ ನಟ ಅಮಿತಾಬ್​ ಬಚ್ಚನ್​ ಇದೀಗ ಅದರ ಬಗ್ಗೆ ಟ್ವೀಟರ್​ನಲ್ಲಿ ಫೋಟೋ ಶೇರ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಲಡಾಖ್​ನಲ್ಲಿ 33 ಡಿಗ್ರಿ ಮೈನಸ್​ ಮೈ ಕೊರೆಯುವ ಚಳಿಯಲ್ಲಿ ನಿಂತು ಚಿತ್ರೀಕರಣವೊಂದರಲ್ಲಿ ಅವರು ಭಾಗಿಯಾಗಿದ್ದರು. ಮಂಕಿ ಕ್ಯಾಪ್, ಚಳಿಗಾಲದ ಜಾಕೆಟ್ ಹಾಗೂ ಕೈಗಳಿಗೆ ಗ್ಲೌಸ್ ಹಾಕಿಕೊಂಡು ಹಿಮದಲ್ಲಿ ನಿಂತುಕೊಂಡಿರುವ ಫೋಟೋ ಶೇರ್​ ಮಾಡಿದ್ದಾರೆ. ಲಡಾಖ್​ಗೆ ಇವೆಲ್ಲವೂ ಹಾಕಿಕೊಂಡು ಹೋಗಿ ಬಂದರೂ ಚಳಿಯಿಂದ ಇವು ನನ್ನನ್ನು ಕಾಪಾಡಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದು, ಯಂಗ್​ ಆ್ಯಕ್ಟರ್​ಗಳಿಗಿಂತಲೂ ನೀವು ಅದ್ಭುತವಾಗಿ ಕೆಲಸ ಮಾಡ್ತಿದ್ದು, ನಿಮ್ಮನ್ನು ನೋಡಿ ನಮಗೆ ಸಂತೋಷವಾಗುತ್ತದೆ ಎಂದಿದ್ದಾರೆ. ಜತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.