ಹೈದರಾಬಾದ್ : ನಟ ಸಲ್ಮಾನ್ ಖಾನ್ ವಕೀಲರು ಕಮಲ್ ಆರ್ ಖಾನ್ (ಕೆಆರ್‌ಕೆ) ವಿರುದ್ಧ ಸಲ್ಲಿಸಿದ ಕಾನೂನು ಮೊಕದ್ದಮೆ ಇತ್ತೀಚೆಗೆ ಬಿಡುಗಡೆಯಾದ ರಾಧೆ ಚಿತ್ರದ ವಿಮರ್ಶೆಗಾಗಿ ಅಲ್ಲ, ಬದಲಾಗಿ ಸಲ್ಮಾನ್ ವಿರುದ್ಧ ಮಾನಹಾನಿ ಆರೋಪ ಹೊರಿಸಿದ್ದಕ್ಕಾಗಿ ಎಂದು ಹೇಳಿದ್ದಾರೆ.
ಕೆಆರ್‌ಕೆ ವಿರುದ್ಧ ಕಾನೂನು ಕ್ರಮಕೈಗೊಂಡ ಸಲ್ಮಾನ್ ಖಾನ್ ನಿರ್ಣಯವನ್ನು ಶ್ಲಾಘಿಸಿದ ಗಾಯಕ ಮಿಕಾ ಸಿಂಗ್, "ಸಲ್ಮಾನ್ ಭಾಯ್ ಕಮಲ್ ಆರ್ ಖಾನ್ಗೆ ಪಾಠ ಕಲಿಸಲು ಅಧಿಕಾರ ವಹಿಸಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಸಲ್ಮಾನ್ ವಿರುದ್ಧ ಮಾನಹಾನಿ ಆರೋಪಗಳನ್ನು ಕಮಲ್ ಪ್ರಕಟಿಸುತ್ತಿರುವುದರಿಂದ ಈ ಮೊಕದ್ದಮೆ ದಾಖಲಿಸಲಾಗಿದೆ. ಕಮಲ್ ಖಾನ್ ನೇರವಾಗಿ ಅಥವಾ ಪರೋಕ್ಷವಾಗಿ ವಿಡಿಯೋ ತಯಾರಿಸಿ ಅಪ್‌ಲೋಡ್ ಮಾಡುವುದು, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾನಹಾನಿಕರ ಪೋಸ್ಟ್‌ಗಳನ್ನು ಹಾಕುವುದರ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಿ ಸಲ್ಮಾನ್ ಮೊಕದ್ದಮೆ ಹೂಡಿದ್ದಾರೆ.