ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ರಾಜ್ಯದ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು , ಹೆಚ್ಚಿನ ಕೊಡುಗೆ ನೀಡಲು ನಿರಂತರವಾಗಿ ಪ್ರೇರಣೆ ನೀಡಿದ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದಗಳು ಎಂದು ಆಯುಷ್ಮಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
" ಈ ಸಾಂಕ್ರಾಮಿಕವು ನಮ್ಮ ಹೃದಯಗಳನ್ನು ಚೂರು ಮಾಡಿದೆ, ಹಿಂದೆಂದೂ ಇಲ್ಲದ ರೀತಿಯಲ್ಲಿ ನೋವು ಮತ್ತು ಸಂಕಟಗಳನ್ನು ಸಹಿಸಿಕೊಂಡಿದ್ದೇವೆ ಪರಸ್ಪರರ ಒಗ್ಗಟ್ಟಿನಿಂದ ಈ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಹಾಯ ಮಾಡುತ್ತೇವೆ ಎಂಬುದನ್ನು ತೋರಿಸಿದೆ. ಇಂದು, ಮತ್ತೆ, ಈ ಸಾಂಕ್ರಾಮಿಕವು ಧೈರ್ಯ ಮತ್ತು ಪರಸ್ಪರ ಬೆಂಬಲವನ್ನು ತೋರಿಸುವಂತೆ ಮಾಡುತ್ತಿದೆ. "ಜನರು, ಭಾರತದಾದ್ಯಂತ, ಒಬ್ಬರಿಗೊಬ್ಬರು ಸಾಧ್ಯವಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ಇನ್ನೂ ಹೆಚ್ಚಿನದನ್ನು ಮಾಡಲು ನಮಗೆ ಪ್ರೇರಣೆ ನೀಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ನಿರಂತರವಾಗಿ ನಮ್ಮ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಆಯುಷ್ಮಾನ್ ದಂಪತಿ ಹೇಳಿದ್ದಾರೆ.
ಆಯುಷ್ಮಾನ್ ಮತ್ತು ತಾಹಿರಾ ಹೆಚ್ಚು ಹೆಚ್ಚು ಭಾರತೀಯರು ಅಗತ್ಯ ಇರುವ ಜನರಿಗೆ ಸಹಾಯ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. "ನಾವು ಸಮುದಾಯವಾಗಿ ಒಗ್ಗೂಡಿ ಪರಸ್ಪರ ಕಾಳಜಿ ವಹಿಸಬೇಕಾದ ಸಮಯ ಇದು. ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದಿದ್ದಾರೆ.