ETV Bharat / sitara

'ಈ ಹುಡುಗರು ಒಲಂಪಿಕ್​​​ನಲ್ಲಿ ಪಾಲ್ಗೊಂಡಿದ್ದರೇ ಪದಕ ಖಚಿತ'- ಆಯುಷ್ಮಾನ್ ಖುರಾನ ಸಹೋದರರು ಹೇಳಿದ್ಯಾರಿಗೆ? - ayushmann aparshakti fun videos

ಚಂಡೀಗಡದ ತಮ್ಮ ಮನೆಯಲ್ಲಿ ಇರುವ ನಟರಾದ ಆಯುಷ್ಮಾನ್​​ ಖುರಾನಾ ಮತ್ತು ಅಪರಶಕ್ತಿ ಖುರಾನಾ ತಮ್ಮ ಬಾಲ್ಯವನ್ನು ಮೆಲುಕು ಹಾಕುತ್ತಿದ್ದು, ಆವೊ ಮಿಲೋ ಆಟವನ್ನು ಆಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Khurrana brothers relive childhood
ಕುರಾನಾ ಸಹೋದರರು
author img

By

Published : Jul 6, 2020, 7:10 PM IST

ಮುಂಬೈ: ಬಾಲಿವುಡ್​ ನಟ-ಸಹೋದರರಾದ ಆಯುಷ್ಮಾನ್​ ಮತ್ತು ಅಪರ​ಶಕ್ತಿ ಖುರಾನ ಅವರು ಆವೊ ಮಿಲೋ ಆಟವನ್ನು ಆಡಿರುವ ವಿಡಿಯೋ ಅನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡರು.

ಆಟ ಆಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅಪರಶಕ್ತಿ ಅವರು, ಈ ಹುಡುಗರಿಬ್ಬರು ಒಲಂಪಿಕ್​​ನಲ್ಲಿ ಭಾಗವಹಿಸಿದ್ದರೇ ಖಂಡಿತವಾಗಿಯೂ ಪದಕ ಗೆಲ್ಲುತ್ತಿದ್ದರು ಎಂದು ವಿಡಿಯೋಗೆ ಅಡಿ ಬರಹ ನೀಡಿದ್ದಾರೆ.

ಆವೊ ಮಿಲೋ ಒಲಂಪಿಕ್​​​​ ಕ್ರೀಡಾಕೂಟದಲ್ಲಿ ವಿಭಾಗಗಳಲ್ಲಿ ಒಂದಾಗಿದೆ. ಒಲಂಪಿಕ್​​ನಲ್ಲಿ ಈ ಇಬ್ಬರು ಹುಡುಗರು ಪಾಲ್ಗೊಂಡಿದ್ದರೇ ಖಂಡಿತವಾಗಿಯೂ ಪದಕ ಸಿಗುತ್ತಿತ್ತು. ಕೆಲವರು ಇದನ್ನು ಆವೊ ಮಿಲೋ ಶಿಲೋ ಶಾಲೋ ಎಂದೂ ಕರೆಯುತ್ತಾರೆ. ಆದರೆ, ನಾವು ಆಮ್ ಲೆಲೊ ಸೆಲಾಮ್ ಸಾಲಿ ಎಂದು ಕರೆಯುತ್ತೇವೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಸಹೋದರರಿಬ್ಬರು ಸದ್ಯ ಚಂಡೀಗಡದಲ್ಲಿ ಇರುವ ತಮ್ಮ ಮನೆಯಲ್ಲಿ ಇದ್ದಾರೆ. ಆಯುಷ್ಮಾನ್ ತಾನು ಸೈಕ್ಲಿಂಗ್ ಕೈಗೆತ್ತಿಕೊಂಡಿದ್ದೇನೆ ಮತ್ತು ತನ್ನ ಜೀವನದುದ್ದಕ್ಕೂ ಸೈಕ್ಲಿಂಗ್ ಉತ್ಸಾಹಿಯಾಗಿದ್ದೇನೆ ಎಂದು ಪೋಸ್ಟ್​​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.