ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರ ಮೊದಲ ಚಿತ್ರ ‘ಸಾರಾಂಶ್’ ಇಂದು 37 ವರ್ಷಗಳನ್ನು ಪೂರೈಸಿದೆ. ಈ ಮೂಲಕ ಖೇರ್ ಅವರ ಸಿನಿ ಜಗತ್ತಿನ ಜರ್ನಿಗೂ 37 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಅವರು ಚಿತ್ರದ ಸ್ಮರಣೀಯ ದೃಶ್ಯವನ್ನು ಮರುಸೃಷ್ಟಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸಾರಾಂಶ್ ಚಿತ್ರಕ್ಕೆ ಒಪ್ಪಿಗೆ ಸೂಚಿಸುವ ಮುನ್ನ ತಾನು ಅನುಭವಿಸಿದ ಎಲ್ಲಾ ಹೋರಾಟ ಮತ್ತು ನೋವಿನ ಪರಿಣಾಮ ಏನೆಂಬುದನ್ನು ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಮಹೇಶ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಅವರ ಅಭಿನಯವು ಎಲ್ಲರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿದೆ.
ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಖೇರ್ ಅವರು, 500ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹೇಗೆ ಮಾಡಿದ್ದಾರೆಂದು ಹೇಳಿದರು. ಅವರ ಯಾವುದೇ ಕೆಲಸವು ಸಾರಾಂಶ್ ಸಿನಿಮಾದಷ್ಟು ಮೆಚ್ಚುಗೆಯಾಗಿಲ್ಲ.
ತನ್ನ ಸತ್ತ ಮಗನ ಚಿತಾಭಸ್ಮವನ್ನು ಸಂಗ್ರಹಿಸಲು ಹೋಗುವ ಚಿತ್ರದ ಅಪ್ರತಿಮ ದೃಶ್ಯದ ಬಗ್ಗೆ ಒಳನೋಟಗಳನ್ನು ಖೇರ್ ಹಂಚಿಕೊಂಡರು. ಪೋಸ್ಟ್ ಮಾಡಿದ ವಿಡಿಯೋದಲ್ಲಿ ಒಂದು ದೃಶ್ಯವು, ಅವರು ಎದುರಿಸಿದ ಎಲ್ಲಾ ಹೋರಾಟಗಳು, ಅವಮಾನಗಳು ಏನು ಎಂಬುದನ್ನು ತೋರಿಸಿದ್ದಾರೆ.