ಹೈದರಾಬಾದ್ : ಕಿರುತೆರೆಯ ಹಿಟ್ ಧಾರಾವಾಹಿ ‘ಪವಿತ್ರ ರಿಷ್ತಾ’ ಮೂಲಕ ಮನೆಮಾತಾಗಿರುವ ನಟಿ ಅಂಕಿತಾ ಲೋಖಂಡೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇವರ ಹೆಸರಿನೊಂದಿಗೆ ವಿಕ್ಕಿ ಜೈನ್ ಅವರ ಹೆಸರು ಕೇಳಿ ಬರುತ್ತಿತ್ತು. ಈಗ ನಟಿ ಡಿಸೆಂಬರ್‌ನಲ್ಲಿ ಮದುವೆ ಆಗಲಿದ್ದಾರೆ. ಇದಕ್ಕೂ ಮುನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟಿಯ ಪ್ರೀ ವೆಡ್ಡಿಂಗ್ ಶೂಟ್‌ನ ಕೆಲವು ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೂ ಮುನ್ನ ಅಂಕಿತಾ ಅವರು ಮರಾಠಿ ಲುಕ್‌ನಲ್ಲಿರುವ ವಿಕ್ಕಿ ಜೈನ್ ಅವರ ಚಿತ್ರವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಂಕಿತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಅವರು ಮರೂನ್ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಇನ್ನು ವಿಕ್ಕಿ ಜೈನ್ ಕೂಡ ಕಪ್ಪು ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

ಚಿತ್ರಗಳನ್ನು ನೋಡಿ: ಹಾಟ್ಲುಕ್ನಲ್ಲಿ ಮರಾಠಿ ಬೆಡಗಿ ಭಾಗ್ಯಶ್ರೀ ಮೋಟೆ
ಚಿತ್ರಗಳನ್ನು ಹಂಚಿಕೊಂಡಿರುವ ಅಂಕಿತಾ, 'ನೀವು ಮಾತ್ರ' ಎಂಬ ಶೀರ್ಷಿಕೆಯನ್ನು ತಮ್ಮ ಬಾಳಸಂಗಾತಿಯನ್ನು ಉದ್ದೇಶಿಸಿ ಬರೆದಿದ್ದಾರೆ. ಅಂಕಿತಾ-ವಿಕ್ಕಿಯ ಈ ಚಿತ್ರಗಳಿಗೆ ಅಭಿಮಾನಿಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಈ ತಿಂಗಳು ಅಂಕಿತಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ.