ETV Bharat / sitara

ಪತ್ನಿ ನೇಹಾ ಧೂಪಿಯಾ ಹುಟ್ಟುಹಬ್ಬಕ್ಕೆ ಹೃದಯಸ್ಪರ್ಶಿ ಬರಹ ಬರೆದ ಪತಿ ಅಂಗದ್ ಬೇಡಿ - ನೇಹಾ ಧೂಪಿಯಾ ಹುಟ್ಟುಹಬ್ಬ

ನಾನು ಯಾವಾಗಲೂ ಕೈ ಹಿಡಿದು ನಿನ್ನ ಜೊತೆ ಹೆಜ್ಜೆ ಹಾಕುತ್ತೇನೆ. ನೀನು ನಿನ್ನ ತನವನ್ನು ಎಂದಿಗೂ ಬಿಡದೆ ಹಾಗೆಯೇ ಇರು.. ಐ ಲವ್​ ಯೂ ಮೆಹರ್ ಕಿ ಮಾ ಎಂದು ಬರೆದಿದ್ದಾರೆ. ಇದಕ್ಕೆ ಮರು ಕಮೆಂಟ್​ ಮಾಡಿರುವ ನೇಹಾ, ನಾನು ನಿನ್ನನ್ನು ಪದಗಳಿಗೂ ಮೀರಿ ಪ್ರೀತಿಸುತ್ತೇನೆ ಮೈ ಲವ್​ ಎಂದು ಪ್ರತಿಕ್ರಿಯಿಸಿದ್ದಾರೆ..

ನೇಹಾ ಧೂಪಿಯಾ ,  ಅಂಗದ್ ಬೇಡಿ
Angad Bedi wins Neha Dhupia
author img

By

Published : Aug 27, 2021, 5:07 PM IST

Updated : Aug 28, 2021, 11:53 AM IST

ಮುಂಬೈ : ಬಾಲಿವುಡ್​​ ಬೋಲ್ಡ್ ನಟಿ, ನಿರೂಪಕಿ ನೇಹಾ ಧೂಪಿಯಾ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಪತಿ ಅಂಗದ್ ಬೇಡಿ, ಹೃದಯಸ್ಪರ್ಶಿ ಬರಹ ಬರೆಯುವ ಮೂಲಕ ಪತ್ನಿಯ ಮನಸ್ಸು ಗೆದ್ದಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ನೇಹಾ ಧೂಪಿಯಾ ಪತಿ ಅಂಗದ್ ಒಂದು ಫೋಟೋವನ್ನು ಪೋಸ್ಟ್​ ಮಾಡಿದ್ದು, ನೇಹಾ ಬರ್ತ್‌ಡೇಗೆ ಶುಭ ಕೋರಿ ಬರಹವನ್ನು ಬರೆದಿದ್ದಾರೆ. ''ನನ್ನ ಶಕ್ತಿಯ ಆಧಾರ ಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು.. ನೀನು ಕೇವಲ ಆಗಸ್ಟ್ 27ನೇ ದಿನ ಮಾತ್ರವಲ್ಲ ಜೀವನಪೂರ್ತಿ ಪ್ರತಿದಿನವೂ ಸಂಭ್ರಮದ ಆಚರಣೆ ಇರುತ್ತದೆ. ವಾಹೇಗುರು ನೀನೂ ಬಯಸಿದ್ದಕ್ಕಿಂತ ಹೆಚ್ಚಿನದನು ನೀಡಲಿ.. ನಾನು ಈ ಜೀವನದಲ್ಲಿ ನಿಮ್ಮ ಅದ್ಭುತ ಪ್ರಯಾಣದ ಒಂದು ಸಣ್ಣ ಭಾಗವಾಗಿದ್ದೇನೆ.. ಮುಂಬರುವ ವರ್ಷಗಳನ್ನು ಒಟ್ಟಿಗೆ ಸ್ಮರಣೀಯವಾಗಿಸಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಯಾವಾಗಲೂ ಕೈ ಹಿಡಿದು ನಿನ್ನ ಜೊತೆ ಹೆಜ್ಜೆ ಹಾಕುತ್ತೇನೆ. ನೀನು ನಿನ್ನ ತನವನ್ನು ಎಂದಿಗೂ ಬಿಡದೆ ಹಾಗೆಯೇ ಇರು.. ಐ ಲವ್​ ಯೂ ಮೆಹರ್ ಕಿ ಮಾ ಎಂದು ಬರೆದಿದ್ದಾರೆ. ಇದಕ್ಕೆ ಮರು ಕಮೆಂಟ್​ ಮಾಡಿರುವ ನೇಹಾ, ನಾನು ನಿನ್ನನ್ನು ಪದಗಳಿಗೂ ಮೀರಿ ಪ್ರೀತಿಸುತ್ತೇನೆ ಮೈ ಲವ್​ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂಗದ್ ಮತ್ತು ನೇಹಾ ಮೇ 2018ರಲ್ಲಿ ವಿವಾಹವಾಗಿದ್ದರು. ಇವರಿಗೆ ಮೆಹರ್ ಎಂಬ ಮಗಳಿದ್ದಾಳೆ. ಸದ್ಯ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ. ನೇಹಾ ಹುಟ್ಟು ಹಬ್ಬಕ್ಕೆ ಸೋಹಾ ಅಲಿ ಖಾನ್ ಮತ್ತು ಕುಬ್ಬ್ರಾ ಸೇಟ್ ಸೇರಿದಂತೆ ಅನೇಕ ನಟ-ನಟಿಯರು ಶುಭ ಕೋರಿದ್ದಾರೆ.

ಓದಿ: ವಿಮಾನ ನಿಲ್ದಾಣದಿಂದ ಕಾಣೆಯಾಗಿದ್ದ ಸಾರಾ, ರಾಧಿಕಾ ಲಡಾಖ್​ನಲ್ಲಿ ಪತ್ತೆ.. ಜಸ್ಲೀನ್​ ಎಲ್ಲಿ!?

Last Updated : Aug 28, 2021, 11:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.