ಮುಂಬೈ: ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವಾ ಅಭಿನಯದ ಗೆಹ್ರೈಯಾನ್ ಚಿತ್ರ ಫೆಬ್ರವರಿ 11ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವೂ ಸಾಕಷ್ಟು ಪ್ರಚಾರದಲ್ಲಿ ತೊಡಗಿಕೊಂಡಿದೆ.
ಚಿತ್ರದ ಪ್ರಚಾರದಲ್ಲಿ ತೊಡಗಿರುವ ನಟಿ ಅನನ್ಯಾ ಪಾಂಡೆ ಮೊದಲಿನಿಂದಲೂ ತಮ್ಮ ನ್ಯೂ ಕಾಸ್ಟೂಮ್ನಿಂದ ಗಮನ ಸೆಳೆಯುತ್ತಿದ್ದಾರೆ. ಈ ಮೊದಲು ಟ್ರೆಂಡಿ ಬ್ರ್ಯಾಲೆಟ್ ಮತ್ತು ಫಾಕ್ಸ್ ಲೆದರ್ ಪ್ಯಾಂಟ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಅನನ್ಯಾ ಪಾಂಡೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ವಿಭಿನ್ನ ರೀತಿಯ ಉಡುಪು ಧರಿಸಿ, ಟ್ರೋಲ್ಗೆ ಗುರಿಯಾಗಿದ್ದಾರೆ.
ಬ್ರೌನ್ ಬ್ರ್ಯಾಲೆಟ್ ಮತ್ತು ಕಾಂಟ್ರ್ಯಾಕ್ಟಿಂಗ್ ಪ್ಯಾಂಟ್ ಧರಿಸಿ ಹಾಗೂ ಹೀಲ್ಸ್ ಬಂದಿದ್ದ ಅನನ್ಯಾ ಪಾಂಡೆ ಚಳಿಯಾಗಿದ್ದು, ಈ ವೇಳೆ, ಸಿದ್ಧಾಂತ್ ತನ್ನ ಜಾಕೆಟ್ ಅನ್ನು ಅನನ್ಯಾಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿಯಿಂದ ಈ ವಿಡಿಯೋ ಟ್ರೋಲ್ಗೆ ಒಳಗಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ