ETV Bharat / sitara

ಬಾಡಿಗೆದಾರರಿಂದ ಬಲವಂತವಾಗಿ ಬಾಡಿಗೆ ಕೇಳುವುದಿಲ್ಲ...ಬಾಲಿವುಡ್ ನಟಿ - ಮುಂಬೈನಲ್ಲಿ ಆಸ್ತಿ ಹೊಂದಿರುವ ಅಮೃತಾ ರಾವ್

ಕೊರೊನಾದಿಂದ ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು ನನ್ನ ಅಪಾರ್ಟ್​ಮೆಂಟ್​​ನಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಂದ ನಾನು ಕೆಲವು ತಿಂಗಳ ಕಾಲ ಬಾಡಿಗೆ ಕೇಳದಿರಲು ನಿರ್ಧರಿಸಿದ್ಧೇನೆ ಎಂದು ಬಾಲಿವುಡ್ ನಟಿ ಅಮೃತಾ ರಾವ್ ತಿಳಿಸಿದ್ದಾರೆ.

Amrita Rao
ಅಮೃತಾ ರಾವ್​
author img

By

Published : Jun 23, 2020, 6:02 PM IST

ಬಾಲಿವುಡ್​ ನಟಿ ಅಮೃತಾ ರಾವ್​ ತನ್ನ ಒಡೆತನದ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿರುವ ಬಾಡಿಗೆದಾರಿಂದ ಬಾಡಿಗೆ ಹಣವನ್ನು ಪಡೆಯುವುದನ್ನು ಕೆಲವು ತಿಂಗಳ ಕಾಲ ಮುಂದೂಡಿದ್ದಾರಂತೆ. ಅಮೃತಾ ರಾವ್ ಮುಂಬೈನ ಅನೇಕ ಕಡೆ ಅಪಾರ್ಟ್​ಮೆಂಟ್ ಸೇರಿ ಇತರ ಆಸ್ತಿಗಳನ್ನು ಹೊಂದಿದ್ದಾರೆ.

Amrita Rao
ಬಾಲಿವುಡ್ ನಟಿ ಅಮೃತಾ ರಾವ್​

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಮೃತಾ, ನನ್ನ ಅಪಾರ್ಟ್​ಮೆಂಟ್​​​ನಲ್ಲಿರುವ ಬಹಳಷ್ಟು ಬಾಡಿಗೆದಾರರು ಸಿನಿಮಾದಲ್ಲಿ ಪ್ರತಿದಿನದ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಇತರರಂತೆ ತಿಂಗಳ ಸಂಬಳ ದೊರೆಯುವುದಿಲ್ಲ. ಈ ಕೊರೊನಾ ವೈರಸ್ ಎಲ್ಲರ ಜೀವನವನ್ನು ಅತಂತ್ರ ಮಾಡಿದೆ. ಈ ಭೀಕರ ಪರಿಸ್ಥಿತಿಯಿಂದ ಎಲ್ಲರೂ ತಮ್ಮ ಕುಟುಂಬಗಳೊಂದಿಗೆ ಊರಿಗೆ ಹೊರಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Amrita Rao
ಬಾಲಿವುಡ್ ನಟಿ ಅಮೃತಾ ರಾವ್​

ಅಷ್ಟೇ ಅಲ್ಲ, ಕೊರೊನಾದಿಂದ ಯಾವುದೇ ತೊಂದರೆಗೆ ಒಳಗಾಗದಿರುವವರು, ಪ್ರತಿ ತಿಂಗಳು ತಪ್ಪದೆ ಸಂಬಳ ಪಡೆಯುತ್ತಿರುವವರು ಮನೆ ಮಾಲೀಕರಿಗೆ ಬಾಡಿಗೆ ನೀಡದೆ ಸತಾಯಿಸಬೇಡಿ. ಲಾಕ್​​​ಡೌನ್​ ನೆಪವಾಗಿರಿಸಿಕೊಂಡು ಕೆಲವರು ಬಾಡಿಗೆ ಕಟ್ಟದೆ ತಪ್ಪಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಕೂಡಾ ಅಮೃತಾ ಸಿಂಗ್ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.