ETV Bharat / sitara

Pan masala brand​​ ಜಾಹೀರಾತಿನಿಂದ ಹಿಂದೆ ಸರಿದ ಅಮಿತಾಭ್​.. ಹುಟ್ಟುಹಬ್ಬದಂದೇ ಮಹತ್ವದ ನಿರ್ಧಾರ

79ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಾಲಿವುಡ್​ನ ಬಿಗ್​​ ಬಿ ಅಮಿತಾಭ್​ ಬಚ್ಚನ್​ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಪಾನ್​ ಮಸಾಲಾ ಬ್ರ್ಯಾಂಡ್​(Pan masala brand​​) ಜಾಹೀರಾತಿನಿಂದ ಅವರು ಹಿಂದೆ ಸರಿದಿದ್ದಾರೆ.

Amitabh Bachchan
Amitabh Bachchan
author img

By

Published : Oct 11, 2021, 5:15 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಂದು 79ನೇ ವಸಂತಕ್ಕೆ ಕಾಲಿಟ್ಟಿದ್ದು, ಅನೇಕರು ವಿಶ್ ಮಾಡಿ ಅವರ ಆರೋಗ್ಯಕ್ಕಾಗಿ ಶುಭಾಶಯ ಕೋರಿದ್ದಾರೆ. ಈ ದಿನವೇ ಬಿಗ್​ ಬಿ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಅವರ ಈ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದಲೂ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾನ್ ಮಸಾಲಾ ಬ್ರ್ಯಾಂಡ್​​ ಜಾಹೀರಾತುವೊಂದರಲ್ಲಿ ನಟ ಅಮಿತಾಭ್​ ಬಚ್ಚನ್​ ನಟನೆ ಮಾಡಿದ್ದರು. ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತವಾಗಿದ್ದರಿಂದ ಇದೀಗ ಕಂಪನಿ ಜೊತೆಗಿನ ಒಪ್ಪಂದ ರದ್ಧು ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಜೊತೆಗೆ ತಾವು ಪಡೆದುಕೊಂಡಿರುವ ಹಣ ಹಿಂತಿರುಗಿಸಲು ಮುಂದಾಗಿದ್ದಾರೆ. ಈ ಜಾಹೀರಾತಿನ ಪ್ರತಿನಿಧಿಯಾಗಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Amitabh Bachchan
79ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಮಿತಾಭ್​ ಮಹತ್ವದ ನಿರ್ಧಾರ ​​

ಇದಕ್ಕೆ ಸಂಬಂಧಿಸಿದಂತೆ ಅವರ ಕಚೇರಿ ಪೋಸ್ಟ್​ ಮಾಡಿದ್ದು, ಅಮಿತಾಭ್​ ಬಚ್ಚನ್​ ಅವರು ಇನ್ಮುಂದೆ ಪಾನ್ ಮಾಸಾಲಾ ಜಾಹೀರಾತುಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿರಿ: 79ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಬಿಗ್ ಬಿ: ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟ ರಣ್​ವೀರ್​ ಸಿಂಗ್​ ಜೊತೆಗೊಡಿ ಅಮಿತಾಭ್​ ಬಚ್ಚನ್​​ ಪಾನ್​ ಮಸಾಲಾ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಕಂಪನಿ ರಾಯಭಾರಿ ಸಹ ಆಗಿದ್ದರು. ಈ ನಿರ್ಧಾರಕ್ಕೆ ಸಾಮಾಜಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಬಾಲಿವುಡ್ ನಟ ಅಮಿತಾಭ್​ ಬಚ್ಚನ್​ ಅವರು ಪಾನ್ ಮಸಾಲಾ ಜಾಹೀರಾತುಗಳಲ್ಲಿ ಭಾಗಿಯಾಗಬಾರದು ಎಂದು ರಾಷ್ಟ್ರೀಯ ತಂಬಾಕು ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ಡಾ. ಶೇಖರ್​ ಸಲ್ಕರ್​ ಸಹ ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.