ಕೇವಲ ಸೌತ್ ಸಿನಿಮಾಗಳು ಮಾತ್ರವಲ್ಲ ಇತ್ತೀಚಿಗೆ ಬಾಲಿವುಡ್ ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿವೆ.
ಇದೀಗ ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಬಾಲಿವುಡ್ನ ‘ಬ್ರಹ್ಮಾಸ್ತ್ರ’ ಚಿತ್ರ ಕೂಡ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರೋ ಬ್ರಹ್ಮಾಸ್ತ್ರ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಲಿದೆ ಅಂತಾ ನಟಿ ಆಲಿಯಾ ಭಟ್ ಕನ್ನಡದಲ್ಲೇ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ರಣ್ಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಮೂರು ಪಾರ್ಟ್ಗಳಲ್ಲಿ ಮೂಡಿಬರಲಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ ಪಾರ್ಟ್ ಒನ್ ಶಿವ’ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ನಟ ರಣ್ಬೀರ್ ಕಪೂರ್ ಅವರು ಶಿವನ ಗೆಟಪ್ನಲ್ಲಿ ಕಾಣಿಸಿದ್ದಾರೆ.
-
09.09.2022
— Alia Bhatt (@aliaa08) December 18, 2021 " class="align-text-top noRightClick twitterSection" data="
ಈ 🔥ದಿನಾಂಕದೊಂದಿಗೆ Brahmastra Part One :
Shiva ನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ! #ಬ್ರಹ್ಮಾಸ್ತ್ರ pic.twitter.com/EoYuFxua3T
">09.09.2022
— Alia Bhatt (@aliaa08) December 18, 2021
ಈ 🔥ದಿನಾಂಕದೊಂದಿಗೆ Brahmastra Part One :
Shiva ನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ! #ಬ್ರಹ್ಮಾಸ್ತ್ರ pic.twitter.com/EoYuFxua3T09.09.2022
— Alia Bhatt (@aliaa08) December 18, 2021
ಈ 🔥ದಿನಾಂಕದೊಂದಿಗೆ Brahmastra Part One :
Shiva ನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ! #ಬ್ರಹ್ಮಾಸ್ತ್ರ pic.twitter.com/EoYuFxua3T
ಬ್ರಹ್ಮಾಂಡದಲ್ಲಿ ಮಹಾ ಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ತಾರೀಖಿನಂದು ಬ್ರಹ್ಮಾಸ್ತ್ರ ಪಾರ್ಟ್ 1 ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜತೆಗೆ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯ ಸೇರಿ ಇನ್ನು ಹಲವರಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ: ಗಣೇಶ್ ಅಭಿನಯದ 'ಸಖತ್' ಚಿತ್ರದ ಯಶಸ್ಸು... ಚಿತ್ರತಂಡದಿಂದ ಸಕ್ಸಸ್ ಮೀಟ್