ಹೈದರಾಬಾದ್ : ನಟಿ ಅಲಯ ಎಫ್ ಅವರು ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ತಾವಿದ್ದ ಅಪಾರ್ಟ್ಮೆಂಟ್ನಲ್ಲಿ ನಡೆದ ಭಯಾನಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಫ್ಲ್ಯಾಟ್ನಲ್ಲಿ ನಡೆದ ಆ ಒಂದು ಘಟನೆ ಬಳಿಕ ನಾನು ಅಪಾರ್ಟ್ಮೆಂಟ್ಗೆ ಹೋಗಲು ಹೆದರುತ್ತಿದ್ದೆ. ಅಲ್ಲಿ ಏನೇನೋ ಘಟನೆಗಳು ನಡೆಯುತ್ತಿದ್ದವು ಎಂದು ಹೇಳಿಕೊಂಡಿದ್ದಾರೆ.
'spooky experience' ಎಂಬ ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ತಾವು ಭಯಭೀತರಾಗಿದ್ದ ಸನ್ನಿವೇಶವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಾನು ವಿದ್ಯಾಭ್ಯಾಸಕ್ಕೆಂದು ನ್ಯೂಯಾರ್ಕ್ನಲ್ಲಿದ್ದಾಗ ನಾನಿದ್ದ ಅಪಾರ್ಟ್ಮೆಂಟ್ನಲ್ಲಿ ಭೂತವಿತ್ತು. ಕೆಲವೊಮ್ಮೆ ಭಯಾನಕ ಎನಿಸುವ ದೊಡ್ಡದಾಗಿ ಶಬ್ಧ ಮಾಡುವ ಹೆಜ್ಜೆ ಸಪ್ಪಳಗಳನ್ನು ಕೇಳುತ್ತಿದ್ದೆ. ಕೆಲವೊಮ್ಮೆ ಬಾತ್ರೂಮ್ನಲ್ಲಿ ಶವರ್ ತಾನಾಗೇ ಆನ್ ಆಗುತ್ತಿತ್ತು ಎಂದು ತಮಗಾದ ಎದೆ ಝಲ್ ಎನಿಸುವ ಅನುಭವವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಟಿ ಪೂಜಾ ಬೇಡಿ ಅವರ ಪುತ್ರಿ ಮತ್ತು ನಟ ಕಬೀರ್ ಬೇಡಿ ಅವರ ಮೊಮ್ಮಗಳಾದ ಅಲಯ ಅವರು ತಮ್ಮ ನ್ಯೂಯಾರ್ಕ್ ಮನೆಯಲ್ಲಿ ಏನೇನೋ ಸಂಗತಿಗಳು ನಡೆಯುತ್ತಿದ್ದವು ಎಂದು ಹೇಳಿದ್ದಾರೆ. ಮನೆಯಲ್ಲಿ ಯಾರೋ ನನ್ನ ಮುಂದೆ ಹೋದ ಹಾಗೆ ಆಗುತ್ತಿತ್ತು. ಸಡನ್ ಆಗಿ ಅವರು ಕಾಣಿಸಿ ಕಣ್ಮರೆಯಾಗುತ್ತಿದ್ದರು.
ಆದರೆ, ನನ್ನ ರೂಮ್ಮೇಟ್ ಕೇಳಿದ್ರೆ, ಇಲ್ಲ ಯಾರೂ ಕಾಣಿಸಿಲ್ಲ ಎನ್ನುತ್ತಿದ್ದರು. ಆದರೆ, ಅಲಯಗೆ ಮಾತ್ರ ಯಾರೋ ತನ್ನ ಬೆನ್ನ ಹಿಂದೆ ಓಡಿಹೋದ ಹಾಗೆ ಭಾಸವಾಗ್ತಿತ್ತಂತೆ. ಈ ಘಟನೆಗಳ ಬಳಿಕ ನಾನು ಮನೆಗೆ ತೆರಳಲು ಸಾಕಷ್ಟು ಭಯ ಪಡುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಅಲಯ ಮಾತ್ರವಲ್ಲ, ಈ ಹಿಂದೆ ಜಾಹ್ನವಿ ಕಪೂರ್, ರಣವೀರ್ ಸಿಂಗ್, ವರುಣ್ ಧವನ್, ವಿಕ್ಕಿ ಕೌಶಲ್, ನವಾಜುದ್ದೀನ್ ಸಿದ್ದಿಕಿ ಮತ್ತು ಬಿಪಾಶಾ ಬಸು ಅವರ ನಿಜ ಜೀವನದಲ್ಲಿ ನೋಡಿದ ಭೂತ ಕಥೆಗಳನ್ನು ಸಹ ಹಂಚಿಕೊಂಡಿದ್ದಾರೆ.