ETV Bharat / sitara

ರಿಯಲ್​ ಹೀರೋ ಈ ಅಕ್ಷಯ್​: ಪಿಎಂ ಕೇರ್ಸ್​​ ನಿಧಿಗೆ 25 ಕೋಟಿ ರೂ ಜತೆ ಮತ್ತೆ 3 ಕೋಟಿ ನೀಡಿದ ನಟ!

ಮಹಾಮಾರಿ ಕೊರೊನಾ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದ ಹೋರಾಟ ನಡೆಸಿದೆ. ರಕ್ಕಸ ಸೋಂಕು ಹೊಡೆದೊಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಇದೀಗ ಮತ್ತೊಮ್ಮೆ ಉಧಾರತೆ ಮೆರೆದಿದ್ದಾರೆ.​

Akshay Kumar
Akshay Kumar
author img

By

Published : Apr 10, 2020, 11:20 AM IST

ಮುಂಬೈ: ದೇಶ ಸಂಕಷ್ಟಕ್ಕೆ ಸಿಲುಕಿದಾಗ ಹಿಂದೆ ಮುಂದೆ ಯೋಚನೆ ಮಾಡದೇ ನೆರವು ನೀಡುವುದರಲ್ಲಿ ಮುಂದಾಗುವುದು ಬಾಲಿವುಡ್​ ನಟ ಅಕ್ಷಯ್​ ಕುಮಾರ್​. ಈ ಹಿಂದೆ ಯೋಧರ ಕುಟುಂಬಕ್ಕೂ ಹಣ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅಕ್ಷಯ್​​ ಕುಮಾರ್​ ಈಗಾಗಲೇ ಪಿಎಂ ಕೇರ್ಸ್​​ ನಿಧಿಗೆ 25 ಕೋಟಿ ರೂ ದೇಣಿಗೆ ನೀಡಿ ಎಲ್ಲರಿಂದ ಶಹಬ್ಬಾಸ್​ಗಿರಿ ಗಿಟ್ಟಿಸಿಕೊಂಡಿದ್ದಾರೆ.

ಇದೀಗ ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ಮತ್ತೊಮ್ಮೆ ಕೈ ಜೋಡಿಸಿರುವ ಈ ನಟ ಬೃಹನ್ಮುಂಬೈ ಮುನ್ಸಿಪಾಲ್​ ಕಾರ್ಫೋರೇಷನ್​ಗೆ 3 ಕೋಟಿ ರೂ ದೇಣಿಗೆ ನೀಡಿದ್ದಾರೆ. ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬಿಎಂಸಿ ಟೊಂಕ ಕಟ್ಟಿ ಕೆಲಸ ಮಾಡುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಅವರ ಕಾರ್ಯಕ್ಕೆ ಬಾಲಿವುಡ್​​ ನಟ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ 3 ಕೋಟಿ ರೂ ದೇಣಿಗೆ ನೀಡಿರುವ ನಟ ಮಾಸ್ಕ್​, ಟೆಸ್ಟಿಂಗ್​ ಕಿಟ್​ ಸೇರಿದಂತೆ ವಿವಿಧ ಸಾಮಾಗ್ರಿ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಜಾಗೃತಿ ಮೂಡಿಸುತ್ತಿರುವ ಈ ನಟ, ಟ್ವಿಟರ್‌ನಲ್ಲಿ #DilSeThankYou ಅಭಿಯಾನ ಶುರು ಪೊಲೀಸರು, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಹಾಲು-ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವವರು, ಸ್ವಯಂ ಸೇವಕರು ಮುಂತಾದವರಿಗಾಗಿ ನಾವೆಲ್ಲರೂ ಸೇರಿ ಮನಸಾರೆ ಧನ್ಯವಾದ ತಿಳಿಸೋಣ ಎಂದಿದ್ದರು.

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಕರಣ ಕಂಡು ಬರುತ್ತಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 1,200ರ ಗಡಿ ದಾಟಿದ್ದು, 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.