ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾ ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. 2001 ಜನವರಿ 17 ರಂದು ಮದುವೆಯಾದ ಈ ಜೋಡಿ 19 ವರ್ಷಗಳ ವೈವಾಹಿಕ ಜೀವನವನ್ನು ಪ್ರೀತಿ, ಸಂತೋಷದಿಂದಲೇ ಕಳೆದಿದೆ.
![Akshay kumar , Twinkle Khanna](https://etvbharatimages.akamaized.net/etvbharat/prod-images/5747430_akki.jpg)
ಪತ್ನಿ ಟ್ವಂಕಲ್ ಖನ್ನಾ ಜೊತೆಗೆ ತಾವು 2.O ಚಿತ್ರದ ಗೆಟಪ್ನಲ್ಲಿರುವ ಪೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅಕ್ಷಯ್ ಕುಮಾರ್, ಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. ಅಕ್ಷಯ್ ಪತ್ನಿಯನ್ನು ಪ್ರೀತಿಸುವುದಲ್ಲದೆ ಬಹಳ ಗೌರವದಿಂದ ಕಾಣುತ್ತಾರೆ. ನನ್ನ ಕರಿಯರ್ ಹಾಗೂ ವೈಯಕ್ತಿಕ ಜೀವನ ಇಂದು ಸಂತೋಷವಾಗಿರುವುದರ ಹಿಂದೆ ಟ್ವಿಂಕಲ್ ಪಾತ್ರ ಸಾಕಷ್ಟಿದೆ ಎಂದು ಅಕ್ಷಯ್ ಆಗ್ಗಾಗ್ಗೆ ಹೇಳುತ್ತಿರುತ್ತಾರೆ.
- " class="align-text-top noRightClick twitterSection" data="
">
ಅಕ್ಷಯ್ ಹಾಗೂ ಟ್ವಿಂಕಲ್ ಖನ್ನಾ 'ಇಂಟರ್ನ್ಯಾಷನಲ್ ಕಿಲಾಡಿ' ಸಿನಿಮಾ ಶೂಟಿಂಗ್ ವೇಳೆ ಮೊದಲ ಬಾರಿಗೆ ಭೇಟಿಯಾದರು. ಈ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಗೆ ತಿರುಗಿತು. ಅಕ್ಷಯ್ ಟ್ವಿಂಕಲ್ ಅವರನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದಾಗ ಟ್ವಿಂಕಲ್ 'ಮೇಲ' ಸಿನಿಮಾದಲ್ಲಿ ನಟಿಸುತ್ತಿದ್ದರು. ಒಂದು ವೇಳೆ ಈ ಸಿನಿಮಾ ಹಿಟ್ ಆದರೆ ನಾನು ನಿನ್ನನ್ನು ಮದುವೆಯಾಗುವುದಿಲ್ಲ, ಸಿನಿಮಾ ಸೋತರೆ ಮದುವೆಯಾಗುತ್ತೇನೆ ಎಂದು ಷರತ್ತು ಹಾಕಿದ್ದರಂತೆ. ಸಿನಿಮಾ ಸಕ್ಸಸ್ ಕಾಣದೆ ಮೊದಲೇ ಹೇಳಿದಂತೆ ಅಕ್ಷಯ್ ಅವರನ್ನು ಟ್ವಿಂಕಲ್ ಮದುವೆಯಾದರು. ಮದುವೆ ನಂತರ ಆ್ಯಕ್ಟಿಂಗ್ನಿಂದ ದೂರ ಉಳಿದಿರುವ ಟ್ವಿಂಕಲ್ ಖನ್ನಾ ಪತಿ, ಮನೆ, ಮಕ್ಕಳ ಕಾಳಜಿ ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.