ETV Bharat / sitara

ಗಲ್ವಾನ್ ಕಣಿವೆ ಘಟನೆಯನ್ನು ತೆರೆ ಮೇಲೆ ತರಲು ಅಜಯ್ ದೇವ್​​​​ಗನ್ ಸಜ್ಜು - ಬಾಲಿವುಡ್ ನಟ ಅಜಯ್ ದೇವ್​​ಗನ್

ಬಹಳಷ್ಟು ಪ್ರಮುಖ ಘಟನೆಗಳು ಈಗಾಗಲೇ ಸಿನಿಮಾ ರೂಪದಲ್ಲಿ ಹೊರಬಂದಿವೆ. ಇದೀಗ ಬಾಲಿವುಡ್​ ನಟ ಅಜಯ್​ ದೇವ್​​ಗನ್​​​​ ಇತ್ತೀಚೆಗೆ ಗಲ್ವಾನ್​​​ ಕಣಿವೆ ಭಾರತ-ಚೀನಾ ಘಟನೆಯನ್ನು ಸಿನಿಮಾವಾಗಿ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Ajay Devgn to bankroll film on Galwan Valley incident
ಅಜಯ್ ದೇವ್​​​​ಗನ್
author img

By

Published : Jul 4, 2020, 10:33 AM IST

ಇತ್ತೀಚೆಗೆ ಲಡಾಕ್​​​ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಗುಂಡಿನ ದಾಳಿಗೆ 20 ಭಾರತೀಯ ಯೋಧರು ಹುತಾತ್ಮರಾಗಿ ಅನೇಕ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಬಾಲಿವುಡ್ ನಟ ಅಜಯ್ ದೇವ್​​​​​​​​​​​​​​​​​​​​​​ಗನ್ ಈ ಘಟನೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಅಜಯ್ ದೇವಗನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರಾ ಎಂಬ ವಿಚಾರ ತಿಳಿದುಬಂದಿಲ್ಲ. ಕಲಾವಿದರ ಆಯ್ಕೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಚಿತ್ರವನ್ನು ಅಜಯ್​ ದೇವ್​​​ಗನ್​​​​​ ಹಾಗೂ ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ.

ಜೂನ್ 05 ರಂದು ಪೂರ್ವ ಲಡಾಕ್​​​ನ ಗಲ್ವಾನ್​ ವ್ಯಾಲಿಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. 1975 ರಲ್ಲಿ ಚೀನಾದೊಂದಿಗೆ ಘರ್ಷಣೆ ನಡೆದಿತ್ತು. ಆದರೆ 45 ವರ್ಷಗಳ ನಂತರ ಮತ್ತೆ ಈ ಘಟನೆ ನಡೆದಿದೆ.

ಸದ್ಯಕ್ಕೆ ಅಜಯ್ ದೇವಗನ್ ನಟನೆಯ 'ಭುಜ್​: ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾ ತೆರೆ ಕಾಣಬೇಕಿದೆ. ಚಿತ್ರದಲ್ಲಿ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ಶಾರದ್ ಕೇಲ್ಕರ್​​​​​​​​​​​​​​​​​​​​ ನಟಿಸಿದ್ದಾರೆ. ಅಭಿಷೇಕ್ ದುಧಿಯಾ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಓಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆ.

ಈ ನಡುವೆ ಅಜಯ್ ದೇವ್​​​ಗನ್ ಮತ್ತೊಂದು ಬಹುನಿರೀಕ್ಷಿತ 'ಮೈದಾನ್' ಚಿತ್ರಕ್ಕಾಗಿ ಸುಮಾರು 16 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಕೊರೊನಾ ಭೀತಿ ಇರುವುದರಿಂದ ಚಿತ್ರೀಕರಣಕ್ಕೆ ಸದ್ಯಕ್ಕೆ ಬ್ರೇಕ್ ನೀಡಲಾಗಿದೆ. ಚಿತ್ರವನ್ನು ಅಮಿತ್ ಶರ್ಮಾ ನಿರ್ದೇಶಿಸುತ್ತಿದ್ದು ಈ ಚಿತ್ರ ಮಾಜಿ ಖ್ಯಾತ ಫುಟ್ಬಾಲ್​ ಆಟಗಾರ, ಕೋಚ್​​​​​​​​​​ ದಿವಂಗತ ಸಯ್ಯದ್ ಅಬ್ದುಲ್​​ ರಹೀಮ್​​​ ಅವರ ಬಯೋಪಿಕ್ ಆಗಿದೆ.

1950 ರಿಂದ ತಮ್ಮ ಜೀವಿತಾವಧಿಯವರೆಗೆ ಸಯ್ಯದ್ ಅಬ್ದುಲ್​​ ರಹೀಮ್ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. 1963 ರಲ್ಲಿ ಅಬ್ದುಲ್ ರಹೀಮ್ ನಿಧನರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.